ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಕ್ಷೇತ್ರ ಸಂರಕ್ಷಣಾ ಸಮಿತಿ ರಚನೆ
ಅಧ್ಯಕ್ಷರಾಗಿ ನಾರಾಯಣ ಕೇಕಡ್ಕ, ಕಾರ್ಯದರ್ಶಿಯಾಗಿ ಚಂದ್ರಶೇಖರ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಬೆಳ್ಯಪ್ಪ ಬಳ್ಳಡ್ಕ

0

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ದೇವಾಲಯದ ಅಭಿವೃದ್ಧಿಗಾಗಿ, ದೇವಾಲಯದ ಯಾವುದೇ ಕಟ್ಟುಪಾಡುಗಳು ಬದಲಾವಣೆಯಾಗದ ಹಾಗೆ, ದೇವಾಲಯದ ವ್ಯವಸ್ಥಾಪನಾ ಸಮಿತಿ ಇಲ್ಲದಾಗ ಇದನ್ನು ನೋಡಿಕೊಳ್ಳುವುದಕ್ಕಾಗಿ ಕ್ಷೇತ್ರ ಸಂರಕ್ಷಣಾ ಸಮಿತಿಯನ್ನು ನ.೧೬ರಂದು ರಚಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ಕೇಕಡ್ಕ, ಕಾರ್ಯದರ್ಶಿಯಾಗಿ ಚಂದ್ರಶೇಖರ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಬೆಳ್ಯಪ್ಪ ಬಳ್ಳಡ್ಕರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿಠಲ ಬಾಣೂರು, ಪುರುಷೋತ್ತಮ ಕಿರ್ಲಾಯ, ಜಯಕೃಷ್ಣ ಕಾಯರ್ತೋಡಿ, ಹೇಮಲತಾ ದೇಂಗೋಡಿ,, ಸದಸ್ಯರಾಗಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಶ್ರೀಧರ ರಾವ್ ಕೆ., ಕುಸುಮಾಧರ ಎ.ಟಿ. ವಿದ್ಯಾಧರ ದೇವರಗುಂಡ, ಚಿದಾನಂದ ಕುದ್ಪಾಜೆ, ಪ್ರಶಾಂತ್ ಕಾಯರ್ತೋಡಿ, ಭವಾನಿಪ್ರಸಾದ್ ಎನ್., ಜಯಂತಿ ಹರೀಶ್ಚಂದ್ರ, ವಿಜಯ ಶೀನಪ್ಪರವರು ಆಯ್ಕೆಯಾದರು.