ಬೆಳ್ಳಾರೆ : ಗ್ರಂಥಾಲಯ ಸಪ್ತಾಹ ಸಮಾರೋಪ ಮತ್ತು ಮಾಹಿತಿ ಕಾರ್ಯಕ್ರಮ

0

ಕರ್ನಾಟಕ ಸರಕಾರ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಆಶ್ರಯದಲ್ಲಿ
ಡಾ| ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಪೆರುವಾಜೆ, ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ, ಸುಳ್ಯ ತಾಲೂಕು ಘಟಕ, ಯುವಜನ ಸಂಯುಕ್ತ ಮಂಡಳಿ ಸುಳ್ಯ ತಾಲೂಕು, ಸ್ನೇಹಿತರ ಕಲಾ ಸಂಘ ಬೆಳ್ಳಾರೆ, ಸ್ನೇಹ ಮಹಿಳಾ ಮಂಡಲ ಬೆಳ್ಳಾರೆ, ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ, ಬೆಳ್ಳಾರ ಇವುಗಳ ಸಹಯೋಗದೊಂದಿಗೆ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭ ಮತ್ತು ಮಾಹಿತಿ ಕಾರ್ಯಕ್ರಮವು ನ.21 ರಂದು ಬೆಳ್ಳಾರೆ ರಾಜೀವ್ ಗಾಂಧೀ ಸೇವಾ ಕೇಂದ್ರದಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಸುಧಾಕರ ರೈ ಪಿ. ಬಿ. ಸಭಾಪತಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕ, ಡಾ| ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ದಾಮೋದರ ಕೆ,, ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಪ್ರಾಂಶುಪಾಲರಾದ ಶ್ರೀಮತಿ ಉಮಾಕುಮಾರಿ,ಬೆಳ್ಳಾರೆ ಇವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು,ಬೆಳ್ಳಾರೆ, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್, ತೇಜಸ್ವಿ ಕಡಪಳ ಅಧ್ಯಕ್ಷರು, ಯುವಜನ ಸಂಯುಕ್ತ ಮಂಡಳಿ, ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಉಲ್ಲಾಸ್ ,ಬೆಳ್ಳಾರೆ, ಉಮೇಶ್‌ ಮಣಿಕ್ಕಾರ ನಿರ್ದೇಶಕರು, ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ, ಬೆಳ್ಳಾರೆ, ಶ್ರೀಮತಿ ಕುಸುಮಾ ಕುರುಂಬುಡೇಲು ಅಧ್ಯಕ್ಷರು, ಸ್ನೇಹ ಮಹಿಳಾ ಮಂಡಲ ಬೆಳ್ಳಾರೆ, ಶ್ರೀಮತಿ ಸುನೀತಾ ನಾಯ್ಕ ಪ್ಲೇಸ್‌ಮೆಂಟ್ ಆಫಿಸರ್ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರು, ಡಾ| ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಪೆರುವಾಜೆ ಉಪಸ್ಥಿತರಿದ್ದರು.


ಗ್ರಾಮ ಪಂಚಾಯತು ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನೂರಕ್ಕೂ ಅಧಿಕ ಭಾರಿ ರಕ್ತದಾನ ಮಾಡಿ ರಾಜ್ಯಮಟ್ಟದಲ್ಲಿ ದಾಖಲೆ ಮಾಡಿದ ಭಾರತೀಯ ರೆಡ್‌ ಕ್ರಾಸ್ ಸುಳ್ಯ ತಾಲೂಕು ಘಟಕದ ಸಭಾಪತಿಗಳಾದ ಸುಧಾಕರ ರೈ ಪಿ. ಬಿ. ಮತ್ತು ಗ್ರಂಥಾಲಯ ಮೇಲ್ವಿಚಾರಕರಾಗಿ ಉತ್ತಮ ಸೇವೆ ಮಾಡಿದ ಬೆಳ್ಳಾರೆ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ಇವರುಗಳನ್ನು ಗೌರವಿಸಲಾಯಿತು, ಕು.ಅಶ್ವಿನಿ ಸ್ವಾಗತಿಸಿ. ಕು. ಮಾನಸ ವಂದಿಸಿದರು, ಕು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ವಿಷಯದಲ್ಲಿ ಶ್ರೀ ಶ್ಯಾಮ ಪ್ರಸಾದ್ ಎಂ.ಆರ್, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತು ಬೆಳ್ಳಾರೆ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಭಾರತೀಯ ರೆಡ್ ಕ್ರಾಸ್ ಸೇವೆ ಮತ್ತು ಯುವಜನತೆ ವಿಷಯದಲ್ಲಿ ಶ್ರೀ ಸುಧಾಕರ ರೈ ಪಿ. ಬಿ. ಸಭಾಪತಿಗಳು ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ಸುಳ್ಯ ತಾಲೂಕು ಘಟಕ ಇವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು.