ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ: ದಿ. ಚಿನ್ನಪ್ಪ ಗೌಡ ಮುಚ್ಚಿನಡ್ಕ ಕುಟುಂಬಕ್ಕೆ ಶತಾಬ್ದಿ ಸಾಂತ್ವನ ನಿಧಿ ಹಸ್ತಾಂತರ

0

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ದಿ.ಚಿನ್ನಪ್ಪ ಗೌಡ ಮುಚ್ಚಿನಡ್ಕ ಇವರ ಪತ್ನಿ ಸುಲೋಚನಾರವರಿಗೆ ರೂ. 10,000 ಶತಾಬ್ದಿ ಸಾಂತ್ವನ ನಿಧಿಯನ್ನು ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್, ನಿರ್ದೇಶಕ ಚಂದ್ರಶೇಖರ ಎಸ್, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ರವಿನಾಥ ಎಂ.ಎಸ್.,ವೆಂಕಪ್ಪ ಗೌಡ ಜೆ.ಟಿ, ಶಾಂತಾರಾಮ ಕಣಿಲೆಗುಂಡಿ, ಸಂಘದ ಲೆಕ್ಕಿಗ ಬೋಜಪ್ಪ ಗೌಡ ರವರು ಉಪಸ್ಥಿತರಿದ್ದರು.