ಬೆಳ್ಳಾರೆ: ಪಂಚಾಯತ್ ಮಟ್ಟದ ಗ್ರಾಮೀಣ ಕ್ರೀಡಾಕೂಟದ ಕಬಡ್ಡಿ ಪಂದ್ಯಾಟದಲ್ಲಿ ಅಮರಮುಡ್ನೂರು ಪಂಚಾಯತ್ ಪ್ರಥಮ

0

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸುಳ್ಯ ತಾಲೂಕು ಪಂಚಾಯತ್,
ಯುವ ಸಬಲೀಕರಣ ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸುಳ್ಯ ಹಾಗೂ ಬೆಳ್ಳಾರೆ, ಕೊಡಿಯಾಲ, ಐರ್ವನಾಡು ಪೆರುವಾಜೆ ಅಮರಮೂಡ್ನೂರು ಗ್ರಾಮ ಪಂಚಾಯತ್ ಇವುಗಳಸಹಯೋಗದೊಂದಿಗೆ ಬೆಳ್ಳಾರೆ
ಕೆ.ಪಿ.ಎಸ್‌.ಸಿ ಮೈದಾನದಲ್ಲಿ ನ.22 ರಂದು ನಡೆದ ಗ್ರಾಮೀಣ ಕ್ರೀಡಾಕೂಟದಲ್ಲಿ
ಪುರುಷರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಅಮರಮುಡ್ನೂರು ಗ್ರಾಮ ಪಂಚಾಯತ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿರುತ್ತದೆ. ಮಹಿಳೆಯರ ತಂಡ ಕಬಡ್ಡಿ ಯಲ್ಲಿ ಮತ್ತು ಕೊಕೋ ಪಂದ್ಯಾಟದಲ್ಲಿ ಮಹಿಳಾ ಸ್ಪರ್ಧಿಗಳು ಭಾಗವಹಿಸಿರುತ್ತಾರೆ.