ಪೈಲಾರು ಕೋಡ್ತುಗುಳಿ ಸೇತುವೆ ಕಾಮಗಾರಿ ಕೆಲಸ ಪ್ರಾರಂಭ- ತಾತ್ಕಾಲಿಕ ಪರ್ಯಾಯ ರಸ್ತೆ ನಿರ್ಮಾಣ

0

ಕುಕ್ಕುಜಡ್ಕ ಪೈಲಾರು ಜಬಳೆ ಸಂಪರ್ಕದ ರಸ್ತೆ ಕಾಮಗಾರಿ ಕೆಲಸ ಪ್ರಾರಂ ಭಗೊಂಡಿದ್ದು ಕಳೆದ ಕೆಲವು ತಿಂಗಳ ಹಿಂದೆ ಕೋಡ್ತುಗುಳಿ ಎಂಬಲ್ಲಿ ‌ರಸ್ತೆ ಅಗಲೀಕರಣ ಮಾಡುವ ಸಂದರ್ಭ ಹಳೆಯ ಸೇತುವೆಯನ್ನು ‌ಕೆಡವಲಾಗಿತ್ತು. ನಂತರ ವಿಪರೀತ ಮಳೆ ಸುರಿದ ಕಾರಣದಿಂದ ಕೆಲಸ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದರಿಂದಾಗಿ ಈ ಭಾಗದ ನಾಗರಿಕರು ಕುಕ್ಕುಜಡ್ಕಕ್ಕೆ ಹಾಗೂ ಸುಳ್ಯಕ್ಕೆ ಬರಲು ಸುತ್ತು ಬಳಸಿ ಬರಬೇಕಿತ್ತು. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಜನಪ್ರತಿನಿಧಿಗಳಲ್ಲಿ ಸಮಸ್ಯೆ ಬಗ್ಗೆ ತಿಳಿಸಿದ್ದರು. ಗುತ್ತಿಗೆದಾರರು ಸಂಪರ್ಕಕ್ಕೆ ಸಿಗದೆ ತೊಂದರೆ ಅನುಭವಿಸಬೇಕಾಯಿತು.

ಬಳಿಕ ಅಲ್ಲಿನ ಸ್ಥಳೀಯ ರೇ ಸೇರಿ ತಾತ್ಕಾಲಿಕವಾಗಿ ನಡೆದುಕೊಂಡು ಹೋಗಲು ಅನೂಕೂಲವಾಗುವ ಮಾದರಿಯಲ್ಲಿ ಅಡಿಕೆ ಮರವನ್ನು ಬಳಸಿ ಪಾಲದ ವ್ಯವಸ್ಥೆ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳು ಹಾಗೂ ‌ಸಾರ್ವಜನಿಕರು ಪಾಲದ ಮೂಲಕ ದಾಟಿ ಅಗತ್ಯ ಕೆಲಸ ಕಾರ್ಯಗಳಿಗೆ ಬರುತ್ತಿದ್ದರು. ಇದೀಗ ಬಹಳ ದಿನಗಳ ನಂತರ ‌ಸೇತುವೆ ಕೆಲಸ ಹಾಗೂ ರಸ್ತೆಯ ಕಾಮಗಾರಿ ಕೆಲಸ ಪ್ರಾರಂಭಿಸಿರುತ್ತಾರೆ. ಸದ್ಯಕ್ಕೆ ತಾತ್ಕಾಲಿಕವಾಗಿ ವಾಹನ ಸಂಚರಿಸಲು ಅನೂಕೂಲವಾಗುವಂತೆ ಮೋರಿ ಅಳವಡಿಸಿ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ನರಕ ಯಾತನೆ ಅನುಭವಿಸಿದ ಈ ಭಾಗದ ನಿವಾಸಿಗಳಿಗೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.