ಕೇರ್ಪಳ ಸಂಪರ್ಕದ ದುರ್ಗಾಪರಮೇಶ್ವರಿ ಕಲಾ ಮಂದಿರ ಬಳಿ ರಸ್ತೆ ಕಾಮಗಾರಿ ಆರಂಭ, ಬದಲಿ ರಸ್ತೆ ಬಳಸಲು ಬೂಡು ವಾರ್ಡ್ ಸದಸ್ಯ ಮನವಿ

0

ಕೇರ್ಪಳ – ಬೂಡು ಸಂಪರ್ಕ ರಸ್ತೆಯ ಮಧ್ಯೆ ದುರ್ಗಾಪರಮೇಶ್ವರಿ ಕಲಾ ಮಂದಿರದ ಬಳಿ ರಸ್ತೆ ಕಾಂಕ್ರೀಟ್ ಕಾಮಗಾರಿ ಇಂದಿನಿಂದ ಆರಂಭಗೊಂಡಿದ್ದು ಆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಬದಲಿ ರಸ್ತೆ ಬಳಸುವಂತೆ ಬೂಡು ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ವಿನಂತಿಸಿದ್ದಾರೆ.

ಸುಳ್ಯ ದುರ್ಗಾ ಪರಮೇಶ್ವರಿ ಕಲಾಮಂದಿರದ ಬಳಿಯ 65ಮೀ ಕಾಂಕ್ರೀಟಿಕರಣ ಕಾಮಗಾರಿ ಆರಂಭವಾಗಿದ್ದು ಮುಂದಿನ 22ದಿನಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ವಾಗಿ (ದ್ವಿಚಕ್ರ ವಾಹನ ಸಹಿತ) ನಿಷೇಧಿಸಲಾಗಿರುತ್ತದೆ. ಬೂಡು, ಕೇರ್ಪಳ ಭಾಗದ ಎಲ್ಲಾ ಸಾರ್ವಜನಿಕರು ಈ ಕುರಿತು ಗಮನಿಸಿ ನಮ್ಮೊಂದಿಗೆ ಸಹಕರಿಸಬೇಕಾಗಿದೆ.
ಬದಲಿ ಮಾರ್ಗವಾಗಿ ರೋಷನ್ ಕುರುಜಿಯವರ ಮನೆ ಬಳಿಯಿಂದ ಕುರುಂಜಿಗುಡ್ಡೆ ಹಾಗೂ ಭಸ್ಮಡ್ಕ ಮಾರ್ಗವನ್ನು ಉಪಯೋಗಿಸುವಂತೆ ಕೋರಲಾಗಿದೆ.


ಹತ್ತಿರದ ಸಾರ್ವಜನಿಕರು ರಾತ್ರೆ ವೇಳೆಯಲ್ಲಿ ತಮ್ಮ ವಾಹನಗಳನ್ನು ಟೌನ್ ಹಾಲ್ ಅಥವಾ ದುರ್ಗಾಪರಮೇಶ್ವರಿ ಕಲಾಮಂದಿರದ ಹಿಂಭಾಗದಲ್ಲಿ ಪಾರ್ಕಿಂಗ್ ಮಾಡಬಹುದು ನಗರ ಪಂಚಾಯತ್ ಪ್ರಕಟಣೆ ಹೊರಡಿಸಿದೆ ಎಂದು ಬೂಡು ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ತಿಳಿಸಿದ್ದಾರೆ.

ಈ ಭಾಗದ ಜನರ ಬಹುವರ್ಷದ ಬೇಡಿಕೆಯ ರಸ್ತೆ ಅಭಿವೃದ್ಧಿ ಇದಾಗಿದ್ದು ಕಾಮಗಾರಿ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ