ಉಬರಡ್ಕ : ಮಂಜಿಕಾನ – ಮುಂಡೋಕಜೆ – ಬದನೆಕಜೆ ರಸ್ತೆ ಅಭಿವೃದ್ಧಿ ಆಗ್ರಹ, ಊರವರಿಂದ ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿ ಬ್ಯಾನರ್ ಅಳವಡಿಕೆ

0

ಉಬರಡ್ಕ ಮಿತ್ತೂರು ಗ್ರಾಮದ ಮುಂಡೋಕಜೆ ಮಂಜಿಕಾನ ಬದನೆಕಜೆ ರಸ್ತೆಯೂ ತೀವ್ರವಾಗಿ ಹದಗೆಟ್ಟಿದೆ. ಹಲವಾರು ಬಾರಿ ಈ ಭಾಗದ ಜನರು ಜನಪ್ರತಿನಿದಿಗಳಿಗೆ ಮನವಿ ಸಲ್ಲಿಸಿದ್ದು ಫಲಪ್ರದವಾಗದೆ ಇರುವುದರಿಂದ ಈ ಭಾಗದ ರಸ್ತೆ ಸಂಪೂರ್ಣವಾಗಿ ಅಭಿವೃದ್ಧಿ ಆಗುವ ವರೆಗೂ ಎಲ್ಲ ಚುನಾವಣೆ ಬಹಿಷ್ಕರಿಸಲು ಈ ಭಾಗದ ರಸ್ತೆ ಪಲಾನುಭವಿಗಳು ನಿರ್ಧರಿಸಿದ್ದಾರೆ. ಇನ್ನಾದರೂ ರಸ್ತೆ ಅಭಿವೃದ್ಧಿ ಕಾಣುವುದೇ ಕಾದು ನೋಡಬೇಕಿದೆ.