ಸೇವಾಜೆ ಶಾಲೆಯ ಬೆಳ್ಳಿ ಹಬ್ಬದ ಕಾರ್ಯಕ್ರಮ‌ ನಡೆಸುವ ಬಗ್ಗೆ ಪೂರ್ವಭಾವಿ ಸಭೆ

0

ದೇವಚಳ್ಳ ಗ್ರಾಮದ ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 25 ವರ್ಷಗಳನ್ನು ಪೂರೈಸಿದ್ದು, ಬೆಳ್ಳಿ ಹಬ್ಬದ ಕಾರ್ಯಕ್ರಮ‌ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಶಾಲಾ ವಠಾರದಲ್ಲಿ ನಡೆಯಿತು.

ಎಸ್.ಡಿ.ಎಂ.ಸಿ.ಅಧ್ಯಕ್ಷ ಸಾಂತಪ್ಪ ರೈ ಯವರ ಅಧ್ಯಕ್ಷತೆ ವಹಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಶಾಲೆಗೆ ಸ್ಥಳ ದಾನ ಮಾಡಿದ ವಿನೋದ್ ರೈ ಸೇವಾಜೆ, ಶಾಲೆಯ ಪೂರ್ವಾಧ್ಯಕ್ಷರಾದ ಅಮೃತ್ ಕುಮಾರ್ ರೈ ಸೇವಾಜೆ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಶಾಲಾ ಹಿತೈಷಿಗಳು, ದಾನಿಗಳಾದ ಕೃಷ್ಣಪ್ಪ ಗೌಡ ದೊಡ್ಡಿಕಾನ, ಶಾಲಾ ಮುಖ್ಯ ಶಿಕ್ಷಕಿ ಪ್ರೇಮಲತಾ ಎನ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳಿಕೃಷ್ಣ ನಂದಗೋಕುಲ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರುಗಳಾದ ನಾರಾಯಣ ಮಾವಿನಗೊಡ್ಲು, ವಿಶ್ವನಾಥ ನಂದಗೋಕುಲ, ಅರುಣಾಕ್ಷ ಶೆಟ್ಟಿಮಜಲು, ಶಶಿಧರ ಶೆಟ್ಟಿಮಜಲು, ಶ್ರೀಕೃಷ್ಣ ಸಾಂಸ್ಕೃತಿಕ ಸಮಿತಿ ಸೇವಾಜೆ ಇದರ ಅಧ್ಯಕ್ಷರಾದ ಜಯದೀಪ್ ಕರಂಗಿಲಡ್ಕ ಹಾಗೂ ಊರಿನ ಎಲ್ಲಾ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಹಿರಿಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ‌ ಬೆಳ್ಳಿ ಹಬ್ಬ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ವಿನೋದ್ ಕುಮಾರ್ ರೈ ಸೇವಾಜೆ, ಗೌರವ ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಪ್ರೇಮಾಲತಾ, ಪ್ರಧಾನ ಕಾರ್ಯದರ್ಶಿಯಾಗಿ ಜಯನಂದ ಪಟ್ಟೆಯವರನ್ನು ಹಾಗೂ ವಿವಿಧ ಸಮಿತಿಗಳಿಗೆ ಸಂಚಾಲಕರುಗಳು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಅತಿಥಿ ಶಿಕ್ಷಕಿ ಸ್ವಾಗತಿಸಿದರು.