ಉದ್ಯಮಿ ಎಚ್. ಎಂ. ನಂದಕುಮಾರ್ ಸುಳ್ಯ ಪದವಿ ಪೂರ್ವ ಕಾಲೇಜಿಗೆ ಭೇಟಿ

0

ಉದ್ಯಮಿ ಹಾಗೂ ಕೆಪಿಸಿಸಿ ಸದಸ್ಯ ಎಚ್ ಎಮ್ ನಂದಕುಮಾರ್ ಇಂದು ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಶಾಲಾ ಪರಿಸರವನ್ನು ವೀಕ್ಷಣೆ ನಡೆಸಿ
ಶಾಲಾ ಪರಿಸರ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಶಾಲಾ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.


ಈ ಸಂದರ್ಭದಲ್ಲಿ ಶಾಲೆಗೆ ಅತಿ ಅವಶ್ಯಕವಾದ ನೂತನ ಶೌಚಾಲಯ ಕಟ್ಟಡಕ್ಕೆ ವಿಧಾನ ಪರಿಷತ್ ಸದಸ್ಯರ ವಿಶೇಷ ಅನುದಾನ ತರಿಸುವಲ್ಲಿ ಸಹಕರಿಸುವಂತೆ ಶಾಲಾ ಉಪ ಪ್ರಾಂಶುಪಾಲರು ಮನವಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಸುದ್ದೀನ್ ಅರಂಬೂರು, ಶಾಲಾ ಶಿಕ್ಷಕರಾದ ಸುಂದರ ಕೆನಾಜೆ, ಎಸ್ ಡಿ ಎಂ ಸಿ ಸದಸ್ಯೆ ಶ್ರೀಮತಿ ಲತಾ ಬೂಡು , ಶಾಲಾ ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಶಂಕರ್ ಪೆರಾಜೆ,ಸ್ಥಳೀಯರಾದ ಭವಾನಿ ಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.