ಕುದ್ಕುಳಿ ರಾಮಣ್ಣ ಆಚಾರ್ಯ ನಿಧನ

0

ಆಲೆಟ್ಟಿ ಗ್ರಾಮದ ಕುದ್ಕುಳಿ ನಿವಾಸಿ ರಾಮಣ್ಣ ಆಚಾರ್ಯ ರವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ‌ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸುಂದರಿ ಕುದ್ಕುಳಿ, ಪುತ್ರರಾದ ರವಿಚಂದ್ರ ಆಚಾರ್ಯ ಕುದ್ಕುಳಿ, ದಿವೀಶ್ ಆಚಾರ್ಯ ಕುದ್ಕುಳಿ, ಪುತ್ರಿ ಶ್ರೀಮತಿ ನಳಿನಾಕ್ಷಿ, ಸೊಸೆ ಶ್ರೀಮತಿ ಅಶ್ವಿನಿ, ಅಳಿಯ ನಾಗೇಶ್ ಮಾಡಾವು, ಸಹೋದರ ನಿವೃತ್ತ ಶಿಕ್ಷಕ ಗಣಪಯ್ಯ ಆಚಾರ್ಯ ಕುದ್ಕುಳಿ ,ಸಹೋದರಿಯರನ್ನು ಮತ್ತು ‌ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.