ಉದ್ಯೋಗ ಖಾತರಿ ಯೋಜನೆ ಸಾಮಾಗ್ರಿ ಹಣ ಬಾರದೆ 3 ವರುಷ, ಸರ್ಕಾರದ ನಿರ್ಲಕ್ಷ್ಯ- ಫಲಾನುಭವಿ ಸಾಲದಲ್ಲಿ – ಸಚಿನ್ ರಾಜ್ ಶೆಟ್ಟಿ

0

ಗ್ರಾಮ ಪಂಚಾಯತ್ ಮೂಲಕ ಉದ್ಯೋಗ ಖಾತರಿ ಯೋಜನೆ ಮೂಲಕ ಹಟ್ಟಿ ರಚನೆ, ಸೋಕ್ ಪಿಟ್ ರಚನೆ ಇನ್ನಿತರ ಕಾರ್ಯ ಗಳ ಸಾಮಾಗ್ರಿ ಹಣ ಬಾರದೆ ಫಲಾನುಭವಿ ಕಂಗಾಲಾಗಿದ್ದಾರೆ. ಯೋಜನೆಗಳನ್ನು ಮಾಡಿಸಲು ಸರ್ಕಾರ ಪಂಚಾಯತ್ ಗೆ ಗುರಿ ನಿಗದಿಗೊಳಿಸಿ ಒತ್ತಡ ಹೇರುತ್ತಿದೆ.ಆದರೆ ಹಣ ನೀಡದೆ ಸತಾಯಿಸುವುದರಿಂದ ಜನತೆ ಉದ್ಯೋಗ ಖಾತರಿ ಯೋಜನೆ ಯಿಂದ ದೂರವಾಗುತ್ತಿದ್ದಾರೆ . ಈ ಯೋಜನೆ ಜಾರಿಗೊಳಿಸಿರುವುದು ಈ ಹಿಂದೆ ಕೇಂದ್ರ ದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ, ಈ ಯೋಜನೆ ಗೆ ಅಪಸ್ವರ ಎಬ್ಬಿಸುವ ಕಾರ್ಯ ಈಗಿನ ಬಿಜೆಪಿ ಸರ್ಕಾರ ದಿಂದ ಆಗುತ್ತಿದೆ , ಇದರ ಬಗ್ಗೆ ಯಾವುದೇ ಸಚಿವರು ಗಮನಹರಿಸುತ್ತಿಲ್ಲ , ಹಣ ತಕ್ಷಣ ಬಿಡುಗಡೆ ಮಾಡದೆ ಇದ್ದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಅನಿವಾರ್ಯ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದು ಪ್ರತಿ ಪಂಚಾಯತ್ ಮೂಲಕ ಸರ್ಕಾರಕ್ಕೆ ಕಾಂಗ್ರೆಸ್ ವತಿಯಿಂದ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.