ಸ್ವಚ್ಛ ಸುಬ್ರಹ್ಮಣ್ಯ ಪರಿಕಲ್ಪನೆಗೆ ಕೆಎಸ್ಎಸ್ ಕಾಲೇಜ್ ವಿದ್ಯಾರ್ಥಿಗಳಿಂದ ಕೊಡುಗೆ

0

ಸುಬ್ರಹ್ಮಣ್ಯ ಕೆ ಎಸ್ ಎಸ್ ಕಾಲೇಜಿನಲ್ಲಿ ಹೊಸ ಕಸದ ಬುಟ್ಟಿಯನ್ನು ಕಾಲೇಜು ವತಿಯಿಂದ ಸುಬ್ರಹ್ಮಣ್ಯ ಪಂಚಾಯಿತಿಗೆ .23 ಹಸ್ತಾಂತರ ಮಾಡಲಾಯಿತು. 2021-22 ನೇ ಸಾಲಿನ ವಿದ್ಯಾರ್ಥಿಗಳ ಕೊಡುಗೆಯನ್ನು ಸ್ವೀಕರಿಸಿದ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ವಿದ್ಯಾರ್ಥಿಗಳನ್ನು ಪ್ರಶಂಸಿದರು. ಅದೇ ರೀತಿ ಈ ಕೊಡುಗೆ ನೀಡಲು ಸಹಕರಿಸದ ಕಾಲೇಜು ಪ್ರಾಚಾರ್ಯರದ ದಿನೇಶ್ ಪಿ ಟಿ ಹಾಗೂ ಉಪನ್ಯಾಸಕಿ ಪ್ರಮೀಳಾ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ 2021 – 22 ನೇ ಸಾಲಿನ ಅಂತಿಮ ಪದವಿಯ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದರು. ಕೆ ಎಸ್ ಎಸ್ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಈ ಕೊಡುಗೆ ನೀಡಲಾಗಿದೆ. ಪಂಚಾಯಿತಿ ವತಿಯಿಂದ ಇನ್ನೂ ಹೆಚ್ಚು ಕಸದ ಬುಟ್ಟಿಯನ್ನು ಇಡಲಾಗುವುದು ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕಸವನ್ನು ಕಸದ ಬುಟ್ಟಿಗೆ ಹಾಕಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಲಲಿತಾ ಸದಸ್ಯರಾದ ಎಚ್ ಎಲ್ ವೆಂಕಟೇಶ್, ಭಾರತೀ ದಿನೇಶ್ ಹಾಗೂ ಕಾಲೇಜು ಪ್ರಾಚಾರ್ಯರದ ದಿನೇಶ್ ಪಿ ಟಿ ಹಾಗೂ ಉಪನ್ಯಾಸಕಿ ಪ್ರಮೀಳಾ, 2021-22 ನೇ ಸಾಲಿನ ಅಂತಿಮ ಪದವಿಯ ವಿದ್ಯಾರ್ಥಿಗಳಾದ ಇಲೈಅರಸ್, ದಿಲೀಶ್ ಕೆ ಸಿ, ಕಾರ್ತಿಕ್ ಡಿ, ಉದಿತ್ ಬಿ ಉಪಸ್ಥಿತರಿದ್ದರು.