ಸುಳ್ಯ ಮರಾಟಿ ಸಮಾಜ ಸೇವಾ ಸಂಘದಿಂದ ಉದಯಕುಮಾರರಿಗೆ ಬೀಳ್ಕೊಡುಗೆ

0


ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದಲ್ಲಿ ಹಲವಾರು ವರ್ಷಗಳಿಂದ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉದಯಕುಮಾರ್ ಮಾಣಿಬೆಟ್ಟುರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಡಿ. 3ರಂದು ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಜನಾರ್ಧನ ಬಿ. ಕುರುಂಜಿಭಾಗ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಕೋಶಾಧಿಕಾರಿ ಭವಾನಿಶಂಕರ ಕಲ್ಮಡ್ಕ, ಮಾಜಿ ಅಧ್ಯಕ್ಷರೂ, ಗೌರವ ಸಲಹೆಗಾರರೂ ಆಗಿರುವ ಡಾ. ರಂಗಯ್ಯ, ಎ.ಕೆ. ನಾಯ್ಕ್ ಅಮೆಬೈಲು, ಜಿ.ಬಿ. ನಾಯ್ಕ್, ಕ್ರೀಡಾ ಕಾರ್ಯದರ್ಶಿ ಜನಾರ್ಧನ ನಾಯ್ಕ್ ಕೇರ್ಪಳ, ಸಂಘಟನಾ ಕಾರ್ಯದರ್ಶಿ ಈಶ್ವರ ವಾರಣಾಶಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಶೋಭ ಎ.ಕೆ. ನಾಯ್ಕ್, ಧರ್ಮಣ್ಣ ನಾಯ್ಕ್ ಗರಡಿ, ಯುವ ವೇದಿಕೆಯ ಅಧ್ಯಕ್ಷ ಮೋಹನ್ ಪೆರಾಜೆ, ಸಂಘದ ಮೇಲ್ವಿಚಾರಕ ಪುನೀತ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.