ಸುಳ್ಯ ಕ.ಸಾ.ಪ‌.ವತಿಯಿಂದ ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬಳೆ ಸುಂದರ ರಾವ್ ರಿಗೆ ನುಡಿನಮನ

0


ಕನ್ನಡ ಸಾಹಿತ್ಯ ಪರಿಷತ್ತ್ ಸುಳ್ಯ ತಾಲೂಕು ಘಟಕದ ವತಿಯಿಂದ ನ.30ರಂದು ವಿಧಿವಶರಾದ ಯಕ್ಷರಂಗದ ಅಪ್ರತಿಮ ಕಲಾವಿದ,ಮಾಜಿ ಶಾಸಕ ಕುಂಬಳೆ ಸುಂದರ ರಾವ್ ರಿಗೆ ನುಡಿನಮನ ಕಾರ್ಯಕ್ರಮ ದ.3ರಂದು ಕನ್ನಡ ಭವನದಲ್ಲಿ ನಡೆಯಿತು.
ಸುಳ್ಯ ಪ.ಪೂ.ಕಾಲೇಜಿನ ಶಿಕ್ಷಕ,ಜಾನಪದ ಸಂಶೋಧಕ ಡಾ.ಸುಂದರ ಕೇನಾಜೆ ಮಾತನಾಡಿ ಕುಂಬಳೆ ಸುಂದರ ರಾವ್ ರವರು ಯಕ್ಷಗಾನಕ್ಕೆ ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ. ಯಕ್ಷರಂಗದ ಪ್ರಭಾವಿಗಳ, ಶ್ರೇಷ್ಠರ ಮಧ್ಯೆ ಮೆರೆಯಬಲ್ಲ ಅಸಾಧಾರಣ ವ್ಯಕ್ತಿತ್ವ ಅವರದ್ದಾಗಿತ್ತು.ಅರ್ಥಗಾರಿಕೆಯಲ್ಲಿ ಮಾತಿನ ಮಂಟಪವನ್ನು ನಿರ್ಮಿಸಿ ಜನಾಕರ್ಷಣೆ ಪಡೆಯುತ್ತಿದ್ದರು ಎಂದು ಹೇಳಿದರು.


ಕ.ಸಾ.ಪ.ಅಧ್ಯಕ್ಷ ಚಂದ್ರಶೇಖರ ಪೇರಾಲು, 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಕಾರ್ಯದರ್ಶಿ ದಾಮೋದರ ಮಾಸ್ತರ್, ಕ.ಸಾ.ಪ.ಗೌ.ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಶ್ರೀಮತಿ ಚಂದ್ರಮತಿ, ಗೌ.ಕೋಶಾಧಿಕಾರಿ ದಯಾನಂದ ಆಳ್ವ ,ಜಿಲ್ಲಾ ಸಮಿತಿ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ಹಾಗೂ ಕ.ಸಾ.ಪ.ನಿರ್ದೇಶಕರುಗಳಾದ ಪ್ರೊ.ಬಾಲಚಂದ್ರ ಗೌಡ, ಸಂಜೀವ ಕುದ್ಪಾಜೆ, ಕೇಶವ ಸಿ‌.ಎ‌.,ಜಯರಾಮ್ ಶೆಟ್ಟಿ, ರೇವತಿ ನಂದನ್, ಶರೀಫ್ ಜಟ್ಟಿಪಳ್ಳ, ರಮೇಶ್ ನೀರಬಿದಿರೆ, ಯೋಗೀಶ್ ಹೊಸೊಳಿಕೆ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಸಾವಿತ್ರಿ ಕಣೆಮರಡ್ಕ,ಚರಿಷ್ಮಾ ಕಡಪಳ ಉಪಸ್ಥಿತರಿದ್ದರು.