ಗುತ್ತಿಗಾರು ಜನಜಾಗೃತಿ ವೇದಿಕೆ ವಲಯಾಧ್ಯಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿ

0

ಜನಜಾಗೃತಿ ವೇದಿಕೆ ಗುತ್ತಿಗಾರು ವಲಯದ ವಲಯಾಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿ ಆಯ್ಕೆಯಾಗಿದ್ದಾರೆ.

ಡಿ.3ರಂದು ಗುತ್ತಿಗಾರಿನಲ್ಲಿ ಪಿ.ಸಿ.ಜಯರಾಮರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಮೊದಲಿಗೆ ಗುತ್ತಿಗಾರು ಗ್ರಾಮಕ್ಕೆ ಕೇಶವ ಹೊಸೊಳಿಕೆ, ನಾಲ್ಕೂರು ಗ್ರಾಮಕ್ಕೆ ಜ್ಯೋತಿ ಪ್ರೇಮಾನಂದ, ದೇವಚಳ್ಳ ಗ್ರಾಮಕ್ಕೆ ವೇಣುಕುಮಾರ್ ಚಿತ್ತಡ್ಕ ಮತ್ತು ಮಡಪ್ಪಾಡಿ ಗ್ರಾಮಕ್ಕೆ ಮಿತ್ರದೇವ ಮಡಪ್ಪಾಡಿ ಯವರನ್ನು ಆಯ್ಕೆ ‌ಮಾಡಲಾಯಿತು. ಬಳಿಕ ವಲಯಾಧ್ಯಕ್ಷ ಸ್ಥಾನಕ್ಕೆ ಮಿತ್ರದೇವ ಮಡಪ್ಪಾಡಿ ಯವರನ್ನು ಕೇಶವ ಹೊಸೊಳಿಕೆ ಸೂಚಿಸಿದರು.

ಈ ಸಂದರ್ಭದಲ್ಲಿ ಮೇಲ್ವಿಚಾರಕ ಬಾಲಕೃಷ್ಣ, ಪ್ರಮುಖರಾದ ಬಾಬು ಮಾಸ್ತರ್ ಅಚ್ರಪ್ಪಾಡಿ, ವಿಜಯ ಚಾರ್ಮತ ಮತ್ತಿತರರಿದ್ದರು.