ಕಳಂಜ: ಚರಂಡಿ ತಡೆಗೋಡೆ ಕುಸಿತ, ಅಪಾಯದಿಂದಿರುವ ರಸ್ತೆ

0

ಕಳಂಜ ಗ್ರಾಮದ ಪಾಂಡಿಪಾಲು ಎಂಬಲ್ಲಿ ಪಿ.ಡಬ್ಲ್ಯೂ .ಡಿ ರಸ್ತೆಯ ಪಕ್ಕದ ಚರಂಡಿಯ ತಡೆಗೋಡೆ ಕುಸಿದು ರಸ್ತೆಗೆ ಅಪಾಯ ಉಂಟಾಗಿದೆ.

10 ವರ್ಷಗಳ ಹಿಂದೆ ರಚಿಸಲ್ಪಟ್ಟ ಈ ತಡೆಗೋಡೆ ಸುಮಾರು 50 ಮೀಟರ್ ಗೂ ಮಿಕ್ಕಿ ಉದ್ದವಿದ್ದು ಎರಡು ಕಡೆ 15 ಮೀಟರ್ ಗೂ ಹೆಚ್ಚು ಉದ್ದದ ತಡೆ ಗೋಡೆ ಎರಡು ಕಡೆ ಚರಂಡಿಗೆ ವಾಲಿದೆ.

ತಡೆಗೋಡೆಯ ಅಡಿ ಭಾಗ ಸ್ಥಳಾಂತರ ಗೊಂಡಿದೆ. ಇದನ್ನು ಆದಷ್ಟು ಶೀಘ್ರ ಪುನರ್ ರಚಿಸದೇ ಇದ್ದಲ್ಲಿ ಮುಂದಿನ ಮಳೆಗಾಲ ರಸ್ತೆಗೆ ಅಪಾಯ ಉಂಟಾಗುವ ಸಂಭವವಿದೆ. ವಾಹನಗಳಿಗೆ ಸೈಡ್ ಕೊಡುವ ಬರದಲ್ಲಿ ವಾಹನ ರಸ್ತೆ ಬಿಟ್ಟು ಸೈಡಿಗೆ ಇಳಿದಲ್ಲಿ ಅಪಘಾತ ಸಂಭವಿಸುವ ಲಕ್ಷಣವಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಇನ್ನಷ್ಟು ತಡೆಗೋಡೆ ಕುಸಿಯುವ ಭೀತಿಯೂ ಇದೆ. ಸಂಬಂಧಪಟ್ಟ ಇಲಾಖೆಯವರು ಇದನ್ನು ಗಮನಿಸಬೇಕಾಗಿ ಕೋರಲಾಗಿದೆ.