ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ಮುಖ್ಯ ಶಿಕ್ಷಕ ಮಹಮ್ಮದ್ ಸಕಾಫಿ ರವರಿಗೆ ‘ಅಲ್ ಹಿಕಮಿ’ ಪದವಿ

0

ಮೊಗರ್ಪಣೆ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಇದರ ಮುಖ್ಯ ಶಿಕ್ಷಕ ಮಹಮ್ಮದ್ ಸಕಾಫಿ ರವರಿಗೆ ‘ಅಲ್ ಹಿಕಮಿ’ ಪದವಿ ಲಭಿಸಿದೆ.
ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ಜಾಮಿಯಾ ಹಿಕಮಿಯಾ ಸಂಸ್ಥೆ ನೀಡಲ್ಪಡುವ ಈ ಪದವಿಯನ್ನು ಡಿಸೆಂಬರ್ 3ರಂದು ನಡೆದ ಸಂಸ್ಥೆಯ 30ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ಪದವಿಯನ್ನು ನೀಡಿ ಗೌರವಿಸಲಾಗಿದೆ.
ಮುಹ್ಹಿಸುನ್ನ ಶೈಕುನಾ ಪೊನ್ನಳ ಉಸ್ತಾದರ ನೇತೃತ್ವದ ಸಂಸ್ಥೆ ಇದಾಗಿದ್ದು ಈ ಸಂಸ್ಥೆಯಲ್ಲಿ ಧಾರ್ಮಿಕ ಪಾಂಡಿತ್ಯವನ್ನು ಪಡೆದ ವ್ಯಕ್ತಿಗಳಿಗೆ ಈ ಬಿರುದನ್ನು ಸಂಸ್ಥೆಯ ವತಿಯಿಂದ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಮಹಮ್ಮದ್ ಸಖಾಫಿ ಯವರು ಮೂಲತಃ ಕೊಡಗು ಜಿಲ್ಲೆಯ ಕೊಟ್ಟಮುಡಿ ನಿವಾಸಿ ಉಮ್ಮರ್ ಹಾಜಿ ಹಾಗೂ ಫಾತಿಮಾ ಅಜ್ಜುಮ್ಮ ದಂಪತಿಗಳ ಪುತ್ರರಾಗಿದ್ದು ಕಳೆದ ಆರು ವರ್ಷಗಳಿಂದ ಸುಳ್ಯ ಮೊಗರ್ಪಣೆ ಮದರಸದಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಎರಡು ವರ್ಷಗಳ ಸಕಾಫಿ ವಿದ್ಯಾ ಕಲಿಕೆಯ ಮೊದಲು 9 ವರ್ಷಗಳ ಕಾಲ ಅಲ್ ಹಿಕಮಿ ವಿದ್ಯಾಭ್ಯಾಸವನ್ನು ಮಾಡಿದ್ದರು.