ಹರಿಹರ: ಅಮೃತ ಗೊಂಚಲು ಗುಂಪಿನ ನೂತನ ಪದಾಧಿಕಾರಿಗಳ ಆಯ್ಕೆ

0

ಹರಿಹರೇಶ್ವರ ದೇವಸ್ಥಾನದಲ್ಲಿ ಅಮೃತ ಗೊಂಚಲು ಮಹಾಸಭೆಯ ಕಾರ್ಯಕ್ರಮ ಡಿ. 6 ರಂದು ಶ್ರೀಮತಿ ಹರ್ಷಿಣಿಕುಮಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಲ್ಲಮೊಗ್ರ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿಜಯ ಜೆ ಡಿ ಇವರು ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸೇವಿಗೆ ತಯಾರಿಕೆಯ ಶ್ರೀಮತಿ ನಿರ್ಮಲ, ಚಾಪೆ ತಯಾರಿಕೆ ಚಿನ್ನಮ್ಮ, ಹಂದಿ ಸಾಕಾಣಿಕೆಯ ದೀಕ್ಷಾ ಇವರು ಸ್ತ್ರೀ ಶಕ್ತಿ ಗುಂಪಿನಿಂದ ಸಾಲ ಪಡೆದು ಸ್ವ ಉದ್ಯೋಗ ಮಾಡುತ್ತಿರುವ ಇವರನ್ನು ಗುರುತಿಸಿ ಶಾಲು ಹೊದಿಸಿ ಹೂವಿನ ಗಿಡಗಳನ್ನು ನೀಡುವುದರ ಮೂಲಕ ಗೌರವಿಸಲಾಯಿತು. ಬಳಿಕ ಅಮೃತ ಗೊಂಚಲು ಗುಂಪಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ನೂತನ ಅಧ್ಯಕ್ಷರಾಗಿ ಶ್ರೀಮತಿ ಲತಾಹಿಮ್ಮತ್ ಕಿರಿಭಾಗ, ಕಾರ್ಯದರ್ಶಿಯಾಗಿ ಶ್ರೀಮತಿ ಅಮಿತ ಯೋಗೀಶ್ ಕಿರಿಭಾಗ ಇವರನ್ನು ನೇಮಿಸಲಾಯಿತು. ವೇದಿಕೆಯಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ತಾರಾಮಲ್ಲಾರ, ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀಮತಿ ರೇಷ್ಮ ಪ್ರಕಾಶ್ ಕಟ್ಟೆಮನೆ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಿಲ್ಪಾ ಕೊತ್ನಡ್ಕ, ಅಮೃತ ಗೊಂಚಲು ಸಮಿತಿ ಕಾರ್ಯದರ್ಶಿ ಶ್ರೀಮತಿ ಅಶ್ವಿನಿ, ಅಂಗನವಾಡಿ ಕಾರ್ಯಕರ್ತೆಯರು, ಶ್ರೀಮತಿ ಅನಂತೇಶ್ವರಿ ಕೊತ್ನಡ್ಕ, ಶ್ರೀಮತಿ ನೇತ್ರಾವತಿ ಐನೆಕಿದು, ಎಲ್ಲಾ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಹ ರ್ಷಿಣಿಯವರು ಸ್ವಾಗತಿಸಿ ಶ್ರೀಮತಿ ಹರಿಣಿಯವರು ವಂದಿಸಿದರು.


ಶ್ರೀಮತಿ ದೀಕ್ಷಾರವರ ಪ್ರಾರ್ಥನೆಯೊಂದಿಗೆ ಮಹಾಸಭೆಯ ಕಾರ್ಯಕ್ರಮ ನೆಡಸಲಾಯಿತು. ಶ್ರೀಮತಿ ಅಶ್ವಿನಿ ಯವರು ವರದಿ ವಾಚನ ಮಾಡಿ ಲೆಕ್ಕಪತ್ರ ಮಂಡಿಸಿದರು.
ಶ್ರೀಮತಿ ವಾಣಿಶ್ರೀಯವರು ಕಾರ್ಯಕ್ರಮ ನಿರೂಪಿಸಿದರು
.