ನಿಂತಿಕಲ್ಲಿನ ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿಗೆ ಹಲವು ಪ್ರಶಸ್ತಿಗಳು

0

ಅಂಬಿಕಾ ಮಹಾ ವಿದ್ಯಾಲಯ ಬಪ್ಪಳಿಗೆ ಪುತ್ತೂರು ಇವರು ನಡೆಸಿದ ಅಂತರ್ ಕಾಲೇಜು ಸಾಂಸ್ಕೃತಿಕ ಮತ್ತು ಸ್ರಜನಶೀಲ ಸ್ಪರ್ಧೆ “”ಅನ್ವೇಷಣಾ” ದಲ್ಲಿ ನಿಂತಿಕಲ್ಲಿನ ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜು ಹಲವು ಬಹುಮಾನಗಳನ್ನು ಪಡೆಯಿತು. ಅಬ್ದುಲ್ ರೆಹಮಾನ್ ಹಫೀಜ್ ಮತ್ತು ಮಹರೂಫ್ ಟಿ. ವಿ. ವರದಿಗಾರಿಕೆ ಯಲ್ಲಿ ಪ್ರಥಮ , ಶೋಭಿತ್ ಕುಮಾರ್ ಮತ್ತು ಜೀವನ್ ನಿಧಿ ಶೋಧ ಪ್ರಥಮ , ವರ್ಷಿಣಿ ಮತ್ತು ವರ್ಷ ಮುಖ ವರ್ಣಿಕೆ ದ್ವಿತೀಯ , ಪಾರಿತೋಷ್ ರೈ ಮತ್ತು ರಿಫಾಷ್ ಶೇಖ್ ನವೋತ್ಪನ್ನ ದ್ವಿತೀಯ , ಸಾಧನಾ ಶೆಟ್ಟಿ ಗೀತ ಪ್ರಸ್ತುತಿ ದ್ವಿತೀಯ , ರಕ್ಷಾ ಭಾಷಣ ದ್ವಿತೀಯ ಬಹುಮಾನ ಪಡೆದರು.
ವಿದ್ಯಾಲಯದ ಉಪನ್ಯಾಸಕರಾದ ಧನ್ಯ ಕೆ ವಿ ಮತ್ತು ಜೀವನ್ ಎಸ್ ಎಚ್ ತಂಡದ ನೇತೃತ್ವ ವಹಿಸಿದ್ದರು.