ಡಿ.14 : ದೇವರಕಾನ ಶಾಲೆಯಲ್ಲಿ ಪ್ರತಿಭಾ ದಿನಾಚರಣೆ, ಸಾಧಕರಿಗೆ ಸನ್ಮಾನ – ಸಾಂಸ್ಕೃತಿಕ ವೈಭವ

0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದೇವರಕಾನದಲ್ಲಿ ಪ್ರತಿಭಾ ದಿನಾಚರಣೆ ,ಸನ್ಮಾನ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಡಿ.14ರಂದು ನಡೆಯಲಿದೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಂದರು ,ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಗ್ರಾ.ಪಂ.ಸದಸ್ಯರಾದ ಶ್ರೀಮತಿ ಶಶಿಕಲಾ ಕುಳ್ಳಂಪಾಡಿ,ಶರ್ಮಿಳಾ ಚೀಮುಳ್ಳು, ಎಸ್.ಡಿ.ಎಂ.ಸಿ.ಅಧ್ಯಕ್ಷ ನವೀನ ಕುಮಾರ್ ಸಾರಕರೆ,ಉಪಾಧ್ಯಕ್ಷೆ ಮಮತಾ ಎಡಮಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್.ಪಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶೀತಲ್ ಯು.ಕೆ, ಶ್ರಿ.ಕ್ಷೇ.ಧ.ಗ್ರಾ.ಯೋಜನೆ ಯೋಜನಾಧಿಕಾರಿ ನಾಗೇಶ್, ಕೆವಿಜಿ ಮೆಡಿಕಲ್ ಕಾಲೇಜಿನ ಎಕ್ಸಿಕ್ಯೂಟಿವ್ ಆಫೀಸರ್ ಅಕ್ಷಯ್ ಕೆ.ಸಿ, ಶಿಕ್ಷಣ ಸಂಯೋಜಕ ವಸಂತ ಏನೆಕಲ್ಲು, ಕೇಂದ್ರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಅನುರಾಧ ಎ.ಆರ್ ಉಪಸ್ಥಿತರಿರುವರು.
ಗೌರವ ಉಪಸ್ಥಿತರಾಗಿ ದೇವರಕಾನ ಗೆಳೆಯರ ಬಳಗದ ಅಧ್ಯಕ್ಷ ಮೋಕ್ಷಿತ್ ಎಡಮಲೆ, ಶಾಲಾಭಿಮಾನಿಗಳಾದ ನೂಜಾಲು ಪದ್ಮನಾಭ ಗೌಡ, ಬರೆಮೇಲು ಕರುಣಾಕರ ಗೌಡ, ಎಡಮಲೆ ಇರ್ವೆರ್ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಎಲ್ಯಣ್ಣ ಗೌಡ ಕುಳ್ಳಂಪಾಡಿ ಉಪಸ್ಥಿತರಿರುವರು.
ಸಾಧಕರಿಗೆ ಸನ್ಮಾನ
ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಿ.ಆರ್.ಪಿ ಯಾಗಿ ಪದೋನ್ನತಿ ಹೊಂದಿ ಕೇಂದ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಅನುರಾಧ ಎ.ಆರ್.,ಎಸ್.ಡಿ.ಎಂ.ಸಿ.ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜತ್ತಪ್ಪ ಗೌಡರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 7.30 ರಿಂದ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.ಗಂಟೆ 8.00 ರಿಂದ ತುಳು ನಾಟಕ ಪ್ರದರ್ಶನ ” ಶಿವದೂತೆ ಗುಳಿಗೆ” ನಡೆಯಲಿದೆ.