ಲೇಖಕಿ ಚಂದ್ರಾವತಿ ಬಡ್ಡಡ್ಕ ಬರೆದ ಎರಡು ಪುಸ್ತಕಗಳು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ

0

ಚಂದ್ರಾವತಿ ಬಡ್ಡಡ್ಕ ಅವರು ಬರೆದ ಎರಡು ಪುಸ್ತಕಗಳು ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೆ ಸಿದ್ಧವಾಗಿವೆ. ಲಘು-ಬಿಗು ಎಂಬ ಕನ್ನಡ ಲಲಿತ ಪ್ರಬಂಧಗಳ ಸಂಕಲನ ಹಾಗೂ ಸುಳ್ಯ ಮಿರರ್ ಡಿಜಿಟಲ್ ಪತ್ರಿಕೆಯಲ್ಲಿ ಬರೆಯುತ್ತಿರುವ ಅಂಕಣದ ಅರೆಭಾಷೆ ಲಘು ಪ್ರಬಂಧಗಳ ಸಂಕಲನ ಚಂದ್ರಕ್ಕನ ಪೊಳ್ಮೆ .
ಉಡುಪಿ ಕಟಪಾಡಿಯ ಅಮ್ಮ ಪ್ರಕಾಶನದಡಿಯಲ್ಲಿ ಪ್ರಕಟವಾಗುತ್ತಿರುವ ಲಘು-ಬಿಗು ಪುಸ್ತಕಕ್ಕೆ ನಾಡಿನ ಹಿರಿಯ ಕವಿ, ಶ್ರೀ ಸುಬ್ರಾಯ ಚೊಕ್ಕಾಡಿಯವರು ಮುನ್ನುಡಿ ಬರೆದಿದ್ದಾರೆ. ವಿವಿಧ ಪತ್ರಿಕೆಗಳು ಮತ್ತು ಡಿಜಿಟಲ್ ಮಾಧ್ಯಗಳಲ್ಲಿ ಪ್ರಕಟಗೊಂಡಿರುವ ಲೇಖನಗಳು ಸೇರಿದಂತೆ ಪುಸ್ತಕದಲ್ಲಿ ಸುಮಾರು 32 ಪ್ರಬಂಧಗಳಿವೆ.


ಚಂದ್ರಕ್ಕನ ಪೊಳ್ಮೆ ಎಂಬುದು ಅರೆಭಾಷಾ ಪ್ರಬಂಧಗಳ ಸಂಕಲನವಾಗಿದೆ. ಹಿರಿಯ ಸಾಹಿತಿ ಎಂ.ಜಿ ಕಾವೇರಮ್ಮ ಇವರ ಮುನ್ನುಡಿಯೊಂದಿಗೆ, ಸುಮಾರು 34 ಪ್ರಬಂಧಗಳನ್ನೊಳಗೊಂಡ ಪುಸ್ತಕವು ಹನಿ-ಮೂನ್ ಪ್ರಕಾಶನ ಬಡ್ಡಡ್ಕ ದಿಂದ ಪ್ರಕಟಗೊಳ್ಳುತ್ತಿದೆ.