ಅಂತರಾಷ್ಟ್ರೀಯ ಮಟ್ಟದ ‘ಬ್ರೈನೋ ಬ್ರೈನ್’ ಸ್ಪರ್ಧೆಯಲ್ಲಿ ಧೃತಿ ಜೆ. ಪೂಜಾರಿ ಚಾಂಪಿಯನ್

0


ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 8ನೇ ಬ್ರೈನೋ ಬ್ರೈನ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಮಡಿಕೇರಿಯ ಧೃತಿ ಜೆ.ಪೂಜಾರಿ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.
ದುಬೈನ ಶೇಖ್ ರಶೀದ್ ಸಭಾಂಗಣದಲ್ಲಿ ನಡೆದ ಅಬಕಾಸ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು 16 ದೇಶಗಳ 2ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈಕೆ ಅಬಕಾಸ್ ಅಂತರಾಷ್ಟ್ರೀಯ ಮುಖ್ಯಸ್ಥ ಆನಂದ್ ಸುಬ್ರಹ್ಮಣ್ಯಂ ಹಾಗೂ ಅಬಕಾಸ್‌ನ ತಾಂತ್ರಿಕ ಮುಖ್ಯಸ್ಥ ಅರಲ್ ಸುಬ್ರಹ್ಮಣ್ಯರವರಿಂದ ಪ್ರಶಸ್ತಿ ಪಡೆದಿದ್ದಾಳೆ.

ಧೃತಿ ಜೆ.ಪೂಜಾರಿ ಮಡಿಕೇರಿಯ ಸಂತ ಜೋಸೆಫ್ ಶಾಲೆಯ 2 ನೇ ತರಗತಿ ವಿದ್ಯಾರ್ಥಿ. ಸುಳ್ಯದ ಪರಿವಾರಕಾನ ಮತ್ತು ಮಡಿಕೇರಿಯಲ್ಲಿ ಕಾರ್ಯಾಚರಿಸುತ್ತಿರುವ ಉಡುಪಿ ಗಾರ್ಡನ್ ರೆಸ್ಟೋರೆಂಟ್‌ನ ಮಾಲೀಕರಾದ ಜಯಂತ್ ಪೂಜಾರಿ ಹಾಗೂ ಚೇತನಾ ದಂಪತಿಯ ಪುತ್ರಿ.