ಡಿ.18 : ಐವರ್ನಾಡಿನಲ್ಲಿ ಅಯ್ಯಪ್ಪ ಸ್ವಾಮಿಗೆ ಹರಕೆಯ ಪೂಜಾ ಕಾರ್ಯಕ್ರಮ

0

ಐವರ್ನಾಡಿನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಹರಕೆಯ ಪೂಜಾ ಕಾರ್ಯಕ್ರಮವು ನರ್ಸರಿ 65, ಶ್ರೀ ಮುತ್ತುಮಾರಿಯಮ್ಮ ದೇವಿ ದೇವಸ್ಥಾನದ ವಠಾರದಲ್ಲಿ ಡಿ.18 ರಂದು ನಡೆಯಲಿದೆ.
ಬೆಳಿಗ್ಗೆ ಗಂಟೆ 8.30 ಕ್ಕೆ ಸ್ಥಳ ಶುದ್ಧೀಕರಣ, 9.30 ರಿಂದ 11.30 ರವರೆಗೆ ಅಯ್ಯಪ್ಪ ಭಕ್ತವೃಂದ ಮತ್ತು ಆರ್.ಪಿ.ಕ್ರಿಯೆಷನ್ಸ್ ಇವರಿಂದ ಭಜನೆ ನಡೆಯಲಿದೆ.ನಂತರ ಇರುಮುಡಿ ಕಟ್ಟುವುದು,ಮದ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.
ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 2.00 ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಉದ್ಯಾನವನ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಾಯಿಗೀತ ಜ್ಞಾನೇಶ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಶಿವಮೊಗ್ಗದ ಶಬರೀಶ ರೋಜಾ ಷಣ್ಮುಗಂ ಮತ್ತು ಸಂದೇಶ ರೋಜಾ ಷಣ್ಮುಗಂ ಭಕ್ತಿಗೀತೆ ಬಿಡುಗಡೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕದ್ರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿಜಯರಾಜ್, ಕಾಮಧೇನು ಗ್ರೂಪ್ಸ್ ನ ಎಂ.ಮಾಧವ ಗೌಡ, ಜ್ಯೋತಿಷಿ ಭೀಮರಾವ್ ವಾಷ್ಟರ್, ಸಾಹಿತಿ ನಿರಂಜನ ಕಡ್ಲಾರ್, ತಮಿಳು ಕಲಾವಿದರ ವೇದಿಕೆ ಅಧ್ಯಕ್ಷ ಕಣ್ಣದಾಸನ್,ನಾಪಟ್ಣ ಗುರುಸ್ವಾಮಿ ಕರುಣಾಕರ,ಧನೇಂದ್ರ ಗುರುಸ್ವಾಮಿ ಉಪಸ್ಥಿತರಿರುವರು.
ಜ್ಯೋತಿಷಿ,ಖ್ಯಾತ ಗಾಯಕ ಭೀಮರಾವ್ ವಾಷ್ಟರ್, ಗಡಿನಾಡ ಗಾಯಕ ವಸಂತ ಬಾರಡ್ಕರವರಿಗೆ ಸನ್ಮಾನ ನಡೆಯಲಿದೆ.
ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಅವರು ಹಾಡಿರುವ ಸಿರಿಗೆರೆಯ ಅಯ್ಯಪ್ಪ ಸ್ವಾಮಿ, ವಸಂತ ಬಾರಡ್ಕರವರ ಕಲಿಯುಗ ವರದ ಶ್ರೀ ಅಯ್ಯಪ್ಪ ಕನ್ನಡ ಭಕ್ತಿಗೀತೆ ಬಿಡುಗಡೆಗೊಳ್ಳಲಿದೆ.
ಎಂದು ಹರಕೆಯ ಸೇವೆ ಮಾಡಿಸುತ್ತಿರುವ ಪೆರುಮಾಳ್ ಲಕ್ಷ್ಮಣ ಶ್ರೀಮತಿ ಶಾಂತಿ ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.