ಡಿ.12 ರಂದು ಪಂಜದಲ್ಲಿ ಮತ್ಸ್ಯದರ್ಶಿನಿ ಶುಭಾರಂಭ

0

ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಇದರ ತಾಜಾ ಹಸಿಮೀನು ಮತ್ತು ಉತ್ಪನ್ನ ಮಾರಾಟ ಹವಾನಿಯಂತ್ರಿತ ಮಳಿಗೆಯು ಡಿ.12 ರಂದು ಪಂಜದ ಕೆಳಗಿನ ಪೇಟೆಯಲ್ಲಿ ಗ್ರಾಮ ಪಂಚಾಯತ್ ಸಂತೆ ಮಾರುಕಟ್ಟೆಯಲ್ಲಿ ಶುಭಾರಂಭಗೊಳ್ಳಲಿದೆ.

ಮಳಿಗೆಯನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಮೀನುಗಾರಿಕಾ ಅಭಿವೃದ್ಧಿ ನಿಗಮ ಮಂಗಳೂರು ಇದರ ಅಧ್ಯಕ್ಷ ಎ.ವಿ.ತೀರ್ಥರಾಮ ಅಧ್ಯಕ್ಷತೆ ವಹಿಸಲಿದ್ದು ಹಲವಾರು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.