ನಾಳೆ ಸುಳ್ಯದಲ್ಲಿ 28 ನೇ ವರ್ಷದ ಅಯ್ಯಪ್ಪ ಸ್ವಾಮಿ ಯ ದೀಪೋತ್ಸವ

0

ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 28 ನೇ ವರ್ಷದ ದೀಪೋತ್ಸವವು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಡಿ.ಆರ್. ಕೆಂಚಪ್ಪ ಗುರುಸ್ವಾಮಿ ಯವರ ನೇತೃತ್ವದಲ್ಲಿ ನಾಳೆ ನಡೆಯಲಿರುವುದು.
ಪ್ರಾತ:ಕಾಲ ಗಣಪತಿ ಹವನ ಬಳಿಕ ಉಷಾ ಪೂಜೆಯಾಗಿ ಮಧ್ಯಾಹ್ನ ಮಹಾಪೂಜೆಯು ನಡೆದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.00 ರಿಂದ ಹಳೆಗೇಟು ಬಳಿಯಿಂದ ‌ಚೆನ್ನಕೇಶವ ದೇವಸ್ಥಾನದ ಅಯ್ಯಪ್ಪ ಮಂಟಪದ ತನಕ ಪಾಲ್ ಕೊಂಬು ಮೆರವಣಿಗೆಯು ಚೆಂಡೆ ವಾದ್ಯಗಳೊಂದಿಗೆ ಸಿಡಿ ಮದ್ದಿನ ಪ್ರದರ್ಶನ ಹಾಗೂ ಬಾಲಕಿಯರ ದೀಪಾರಾಧನೆಯ ಬೆಳಕಿನೊಂದಿಗೆ ಅಯ್ಯಪ್ಪ ವೃತಧಾರಿಗಳ ಸಮ್ಮುಖದಲ್ಲಿ ಸಾಗಿ ಬರಲಿದೆ. ರಾತ್ರಿ ಕಾಟುಕುಕ್ಕೆ ಶ್ರೀ ದೇವಿ ಭಜನಾ ಮಂಡಳಿ ಸುಂದರಗಿರಿ ಬಾಳೆಮೂಲೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. ಬಳಿಕ ಶ್ರೀ ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿ ಕಳವಾರು ಬಾಳ ಮಂಗಳೂರು ಮೇಳದವರಿಂದ ಶ್ರೀ ದೇವಿ ರಕ್ತೇಶ್ವರೀ ಮಹಾತ್ಮೆ ಎಂಬ ತುಳು ಯಕ್ಷಗಾನ ಬಯಲಾಟ ‌ಪ್ರದರ್ಶನವಾಗಲಿರುವುದು. ಡಿ.12 ರಂದು ಪ್ರಾತ:ಕಾಲ ಅಯ್ಯಪ್ಪ ವೃತಧಾರಿಗಳಿಂದ ಅಗ್ನಿ ಸೇವೆಯು ನಡೆಯಲಿರುವುದು ಎಂದು ಸಂಘಟಕರು ತಿಳಿಸಿದರು.