ತೊಡಿಕಾನ: ಅಡ್ಯಡ್ಕ – ಚಾಂಬಾಡು ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ

0

ತೊಡಿಕಾನ ಗ್ರಾಮದ ಅಡ್ಯಡ್ಕದಿಂದ ಚಾಂಬಾಡು ಮೂಲಕ ಪೆರಾಜೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿ ಹಾಗೂ ಕಾಂಕ್ರೀಟ್ ಕರಣಕ್ಕೆ ಸಚಿವ ಎಸ್. ಅಂಗಾರರವರು ದ. 5 ರಂದು ಗುದ್ದಲಿ ಪೂಜೆ ನೆರವೇರಿಸಿದರು.

ರಸ್ತೆ ಕಾಂಕ್ರೀಟ್ ಕರಣ ಹಾಗೂ ಅಭಿವೃದ್ಧಿ 50 ಲಕ್ಷ ರೂಪಾಯಿ ಅನುದಾನದಲ್ಲಿ ನೆರವೇರಲಿದೆ. ಗುದ್ದಲಿ ಪೂಜೆ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ , ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ರಮಣ ಪೆತ್ತಾಜೆ , ವಿನೋದ ಚಂದ್ರಶೇಖರ್ , ಭವಾನಿ ಚಿಟ್ನೂರು , ಉಷಾ ಅಡ್ಯಡ್ಕ , ಶಿವಾನಂದ ಕುಕ್ಕುಂಬಳ ,ಕೇಶವ ಅಡ್ತಲೆ , ಬಿಜೆಪಿ ಕಛೇರಿ ಸಹಾಯಕ ಸುಧಾಕರ ಅಡ್ಯಡ್ಕ , ಪ್ರಮುಖರಾದ ಕೃಷ್ಣ ಬೈಪಡಿತ್ತಾಯ , ಉಮಾಶಂಕರ ಅಡ್ಯಡ್ಕ , ಗೋವರ್ಧನ ಬೊಳ್ಳೂರು , ರವಿಶಂಕರ್ ಅಡ್ಯಡ್ಕ, ಮತ್ತಿತರರು ಉಪಸ್ಥಿತರಿದ್ದರು.