ದುಗ್ಗಲಡ್ಕ -ಕೊಡಿಯಾಲಬೈಲ್- ಸುಳ್ಯ ರಸ್ತೆ ಕಾಂಕ್ರೀಟೀಕರಣ ಸಚಿವರಿಂದ ಉದ್ಘಾಟನೆ

0


ದುಗ್ಗಲಡ್ಕ – ಕೊಡಿಯಾಲಬೈಲ್-ಸುಳ್ಯ ರಸ್ತೆಯ 4 ಕಡೆಗಳಲ್ಲಿ ಶಾಸಕರ 50 ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡಿದ್ದು ಅದರ ಉದ್ಘಾಟನೆಯನ್ನು ಇಂದು ದುಗ್ಗಲಡ್ಕದಲ್ಲಿ ಸಚಿವರಾದ ಎಸ್.ಅಂಗಾರ ನೆರವೇರಿಸಿದರು.


ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರು ಈ ರಸ್ತೆಗೆ ಇನ್ನೂ 50 ಲಕ್ಷ ಅನುದಾನ ಒದಗಿಸಿ ಶೀಘ್ರವಾಗಿ ಕಾಮಗಾರಿ ನಡೆಸಲಾಗುವುದು ಎಂದು ಹೇಳಿದರು‌.
ನ‌.ಪಂ.ಅಧ್ಯಕ್ಷ ವಿನಯಕುಮಾರ ಕಂದಡ್ಕ, ಸದಸ್ಯರುಗಳಾದ ಶ್ರೀಮತಿ ಶಶಿಕಲಾ ನೀರಬಿದಿರೆ, ಬಾಲಕೃಷ್ಣ ರೈ ದುಗ್ಗಲಡ್ಕ, ಮುಖ್ಯಾಧಿಕಾರಿ ಸುಧಾಕರ್, ಮಾಜಿ ಆಧ್ಯಕ್ಷೆ ಶೀಲಾವತಿ ಮಾಧವ, ಪ್ರಮುಖರಾದ ಹೇಮಂತ ಕುಮಾರ್ ಕಂದಡ್ಕ, ದಿನೇಶ್ ಡಿ.ಕೆ.,ಸುಂದರ ರಾವ್, ಚಂದ್ರಶೇಖರ ಗೌಡ ಮೋಂಟಡ್ಕ, ಕುಶಾಲಪ್ಪ ಗೌಡ ಕಜೆ, ಧನಂಜಯ(ಮನು) ದುಗ್ಗಲಡ್ಕ, ರಾಮಚಂದ್ರ ಕೊಯಿಕುಳಿ,ಬಾಬು ಮಣಿಯಾಣಿ, ಪ್ರಕಾಶ್ ರೈ,ಸಂದೀಪ್ ರೈ , ಅರುಣ್ ಇಂಜಿನಿಯರ್,ಸುಬ್ರಹ್ಮಣ್ಯ, ಗಿರೀಶ್ ರೈ ಮೊದಲಾದವರು ಉಪಸ್ಥಿತರಿದ್ದರು.