ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ

0

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಡಿ. 1ರಂದು ನಡೆಯಿತು.
ಕೆವಿಜಿ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ಶಾಸ್ತೃ ವಿಭಾಗ ಮುಖ್ಯಸ್ಥರಾದ ಡಾ ದಿನೇಶ್ ಪಿ ವಿ ಮಾಹಿತಿ ನಿಡುತ್ತಾ ಜಗತ್ತಿನಲ್ಲಿ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಸೊಂಕು ಹೆಚ್.ಐ.ವಿ \ ಏಡ್ಸ್ ಇದು ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ಹಿಗಾಗಿ ಈ ಸೊಂಕಿಗೊಳಗಾದವರು ನಡೆಸುವ ಹೋರಾಟದ ಯಶಸ್ವಿಗೆ ದೈರ್ಯ ತುಂಬಲು ಸಂಕಲ್ಪವನ್ನು ಮಾಡಿಸುವಂತಹ ಮಹತ್ವದ ದಿನ ವಿಶ್ವ ಏಡ್ಸ ದಿನವಾಗಿದೆ.
ವಿಶ್ವ ಏಡ್ಸ್ ದಿನ 1988ರಿಂದ ಪ್ರತಿ ವರ್ಷ ಡಿಸೆಂಬರ್ 1ರಂದು ಗೊತ್ತುಪಡಿಸಲಾಗಿದೆ. ವಿಶ್ವದಾದ್ಯಂತ ಹೆಚ್.ಐ.ವಿ ಯೊಂದಿಗೆ ವಾಸಿಸುವ ಲಕ್ಷಾಂತರ ಜನರೊಂದಿಗೆ ಒಗ್ಗಟ್ಟನ್ನು ತೊರಿಸಲು ಒಂದು ಅವಕಾಶವಾಗಿದೆ. ಈ ದಿನದಂದು ಹೆಚ್ಚಿನ ಜನರು ಕೆಂಪು ರಿಬ್ಬನ್ ದರಿಸಿ ಏಡ್ಸ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ವಿಶ್ವ ಏಡ್ಸ್ ದಿನದ ಥೀಮ್
ಸಾಮಾನ್ಯವಾಗಿ ನಿರಂತರ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಕಡೆಗಣಿಸುವವರೆ ಹೆಚ್ಚು ಇನ್ನೂ ಪರಿಕ್ಷೆಗೆ ಒಳಗಾಗಿ ಕಾಯಿಲೆಯ ನಿಖರತೆಯನ್ನು ಪಡೆದುಕೊಳ್ಳುವುದು ದೂರದ ವಿಚಾರ. ಇಂತಹ ತಪ್ಪುಗಳನ್ನು ಮಾಡದಂತೆ ಡಬ್ಲಯು ಹೆಚ್ಓ ಜಾಗೃತಿ ಮೂಡಿಸುತ್ತದೆ. ಹಿಗಾಗಿ ಈ ವರ್ಷ ನಮ್ಮನ್ನು ಪರಿಕ್ಷೆಗೆ ಒಳಪಡಿಸುವುದು. ಹೆಚ್.ಐ.ವಿಯನ್ನು ಅಂತ್ಯಗೊಳಿಸಲು ಸಮಾನತೆಯನ್ನು ಸಾಧಿಸುವುದು ಎಂಬುದು ವಿಶ್ವ ಏಡ್ಸ್ ದಿನದ 2022ರ ವಿಷಯವಾಗಿದೆ.
ಎಂದರು. ಈ ಸಂಧರ್ಭದಲ್ಲಿ ಕಾಲೇಜಿನ ಡೀನ್ ಡಾ ನಿಲಾಂಬಿಕೈ ನಟರಾಜನ್ ಉಪಸ್ಥಿತರಿದ್ದರು.