ಪಂಜದಲ್ಲಿ ಮತ್ಸ್ಯದರ್ಶಿನಿ ಶುಭಾರಂಭ, ” ಈಗ ನಮ್ಮದು ದೇಶದಲ್ಲಿ ನಂಬರ್ ಒನ್ ಮೀನುಗಾರಿಕಾ ಇಲಾಖೆ” : ಎ ವಿ ತೀರ್ಥರಾಮ

0

ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಇದರ ಹಸಿಮೀನು ಮತ್ತು ಉತ್ಪನ್ನ ಮಾರಾಟ ಹವಾನಿಯಂತ್ರಿತ ಮಳಿಗೆ
‘ಮತ್ಸ್ಯದರ್ಶಿನಿ’ ಯು ಡಿ.12 ರಂದು ಪಂಜದ ಕೆಳಗಿನ ಪೇಟೆಯಲ್ಲಿ ಗ್ರಾಮ ಪಂಚಾಯತ್ ಸಂತೆ ಮಾರುಕಟ್ಟೆ ಕಟ್ಟಡದಲ್ಲಿ ಶುಭಾರಂಭ ಗೊಂಡಿತು.

ಮಳಿಗೆಯನ್ನು . ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಂಗಳೂರು ಇದರ ಅಧ್ಯಕ್ಷ ಎ.ವಿ.ತೀರ್ಥರಾಮ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ
“ಮೀನು ಉದ್ಯಮ ಬೆಳೆಯಲು ಯುವಕರ ಕಾಳಜಿ ಅಗತ್ಯ. ಸ್ವ ಉದ್ಯೋಗದೊಂದಿಗೆ ಮೂಲಕ ಜನರಿಗೆ ತಾಜಾ ಮೀನು ಒದಗಿಸುವ ಕೆಲಸ ಆಗುತ್ತಿದೆ.ಅದಕ್ಕಾಗಿ ಮೀನುಗಾರಿಕೆ ಇಲಾಖೆ ಬಹಳಷ್ಟು ಕಾಯಕಲ್ಪ ಮಾಡಿದೆ.ಅಂಗಾರ ರವರು ಮೀನುಗಾರಿಕೆ ಸಚಿವರಾದ ಬಳಿಕ ಬಹಳಷ್ಟು ಅಭಿವೃದ್ಧಿಗಳು ಆಗಿದೆ. ಮೀನುಗಾರಿಕೆಯಲ್ಲಿ ದೇಶದಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದ ಕರ್ನಾಟಕ ಮೀನುಗಾರಿಕಾ ಇಲಾಖೆ ಈ ಭಾರಿ ಮೊದಲ ಸ್ಥಾನ ಪಡೆದು 10 ಲಕ್ಷ ರೂಪಾಯಿ ನಗದು ಪ್ರಶಸ್ತಿ ಸ್ವೀಕರಿಸಿದೆ”. ಎಂದು ಅವರು ಹೇಳಿದರು.


ಪಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಡಬ ಶ್ರೀ ದುರ್ಗಾಂಬಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೀತಾರಾಮ ಗೌಡ ಹೊಸೋಳಿಕೆ, ಪಂಜ ಗ್ರಾಮ ಪಂಚಾಯತ್ ಸದಸ್ಯ ಬಿ ಲಕ್ಷ್ಮಣ ಗೌಡ ಬೊಳ್ಳಾಜೆ,ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸೂಂತಾರು, ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು,ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಿನೋದ್ ಬೊಳ್ಮಲೆ ಸ್ವಾಗತಿಸಿದರು ಮತ್ತು ನಿರೂಪಿಸಿದರು. ಸಂಸ್ಥೆಯ ಪಾಲುದಾರ ವಾಸುದೇವ ಕೆರೆಕ್ಕೋಡಿ ವಂದಿಸಿದರು. ಸಂಸ್ಥೆಯ ಪಾಲುದಾರರಾದ ವಾಸುದೇವ ಕೆರೆಕ್ಕೋಡಿ, ಕಾರ್ತಿಕ್ ಕಣ್ಕಲ್, ಹರ್ಷಕುಮಾರ್ ಕಣ್ಕಲ್ ಗೋಪಾಲಕೃಷ್ಣ ದೇವಸ್ಯ , ಮೊದಲಾದವರು ಉಪಸ್ಥಿತರಿದ್ದರು.