ಡಿ.24: ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದಲ್ಲಿ 36ನೇ ವರ್ಷದ ದೀಪೋತ್ಸವ

0

ಆಲೆಟ್ಟಿ ಗ್ರಾಮದ ಬಡ್ಡಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ 36ನೇ ವರ್ಷದ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಡಿ. 24 ರಂದು ನಡೆಯಲಿರುವುದು. ಬೆಳಗೆ ಗಣಪತಿ ಹವನವಾಗಿ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಯಾಗಲಿರುವುದು.
ಸಂಜೆ 5:30 ಕ್ಕೆ ಪಾಲ್ ಕೊಂಬು ಮೆರವಣಿಗೆಯು ಪಿಂಡಿಬನ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಹೊರಟು ಅಯ್ಯಪ್ಪ ಭಜನಾ ಮಂದಿರದವರೆಗೆ ಸಾಗಿ ಬರಲಿದೆ. ರಾತ್ರಿ ಗಂಟೆ 7:30 ಕ್ಕೆ ಅಯ್ಯಪ್ಪ ವೃತಧಾರಿಗಳಿಂದ ಮೇಲೆರಿಗೆ ಅಗ್ನಿ ಸ್ಪರ್ಶವಾಗಲಿರುವುದು. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಉಪನ್ಯಾಸ ನಡೆಯಲಿದೆ. ರಾತ್ರಿ ಗಂಟೆ 9:30 ರಿಂದ ಶ್ರೀ ವನದುರ್ಗ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ ಇವರಿಂದ ಛತ್ರಪತಿ ಹಿಂದೂ ಸಾಮ್ರಾಜ್ಯದ ಅಧಿಪತಿ ಎಂಬ ಯಕ್ಷಗಾನ ಬಯಲಾಟ ನಡೆಯಲಿರುವುದು. ಮರುದಿನ ಪ್ರಾತಕಾಲ ಅಯ್ಯಪ್ಪ ಮೃತಧಾರಿಗಳಿಂದ ಅಗ್ನಿಸೇವೆ ನಡೆಯಲಿರುವುದು.