ಎನ್ನೆಂಸಿ: ವ್ಯವಹಾರ ಆಡಳಿತ ವಿಭಾಗದಿಂದ ದೀಕ್ಷಾ ಟ್ರೇಡರ್ಸ್ ಗೆ ವ್ಯವಹಾರ ಭೇಟಿ

0

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಪ್ರಥಮ ಬಿಬಿಎ ವಿದ್ಯಾರ್ಥಿಗಳಿಗೆ ಸುಳ್ಯದ ಜಟ್ಟಿಪಳ್ಳದಲ್ಲಿರುವ ದೀಕ್ಷಾ ಟ್ರೇಡರ್ಸ್ ಗೆ ವ್ಯವಹಾರ ಭೇಟಿ ಕಾರ್ಯಕ್ರಮವನ್ನು ಡಿಸೆಂಬರ್ 08 ರಂದು ಆಯೋಜಿಸಲಾಗಿತ್ತು. ದೀಕ್ಷಾ ಟ್ರೇಡರ್ಸ್ ನ ಮಾಲಕರಾದ ಮಾಧವ ರಾವ್ ವಿದ್ಯಾರ್ಥಿಗಳೊಂದಿಗೆ ತಮ್ಮ‌ ಸುದೀರ್ಘ ಕಾಲದ ವ್ಯವಹಾರ ಜ್ಞಾನವನ್ನು ಹಂಚಿಕೊಂಡರು.

ವ್ಯವಹಾರದಲ್ಲಿ ಇರಬೇಕಾದ ಜಾಣ್ಮೆ, ವ್ಯವಹಾರದ ಲಾಭ – ನಷ್ಟಗಳನ್ನು ವಿವರಿಸುವುದರೊಂದಿಗೆ, ಕೇವಲ ಸರ್ಕಾರಿ ಉದ್ಯೋಗದ ಕಡೆ ಮಾತ್ರ ಗಮನ ಹರಿಸದೆ ಸ್ವ ಉದ್ಯೋಗದ ಕಡೆ ಕೂಡ ಒಲವು ಹರಿಸಬೇಕು ಎಂದರು. ಬಿಬಿಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅನಂತಲಕ್ಷ್ಮಿ, ಉಪನ್ಯಾಸಕರುಗಳಾದ ಹರಿಪ್ರಸಾದ್ ಎ ವಿ, ಶ್ರೀಮತಿ ಲೀನಾ ವೈ ಎನ್ ಹಾಗೂ ಮೀನಾಕ್ಷಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.