ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರೆಶರ್‍ಸ್‌ಡೇ ಆಚರಣೆ

0

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ-ಸೆನ್ಸಾದ ಉದ್ಘಾಟಣಾ ಸಮಾರಂಭ ಸ್ವಾಗತ ಕಾರ್ಯಕ್ರಮ ಅಭ್ಯುದಯವು ದ. ೧೦ ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾರಂಭದ ಮುಖ್ಯ ಅತಿಥಿಗಳಾದ ಶ್ರೀ ಅಶ್ವಿನ್ ಎಲ್. ಶೆಟ್ಟಿ, ಆಡಳಿತಾಧಿಕಾರಿ ವಿದ್ಯಾರಶ್ಮಿ ಸಮೂಹ ಸಂಸ್ಥೆಗಳು ಸವಣೂರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಂತ್ರಜ್ಞರು ಆಧುನಿಕ ವಿಶ್ವದ ಅದ್ಭುತ ಸೃಜನಶೀಲರು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತು ಅಸಾಧ್ಯವಾದುದನ್ನು ಸಾಧ್ಯವಾಗಿಸುವಲ್ಲಿ ಅಮೂಲ್ಯ ಸಮಯವನ್ನು ಧಾರೆಯೆರೆದು, ಜ್ಞಾನವು ದೀಪದ ಕಾಂತಿ ಪಸರಿಸಿದಂತೆ ವಿದ್ಯಾರ್ಥಿ ಜೀವನವನ್ನು ಧನ್ಯರಾಗಿಸಿಕೊಳ್ಳಿರೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ. ಯವರು ಮಾತನಾಡಿ ಸೆನ್ಸಾ ವೇದಿಕೆಯು ನವನವೀನ ತಂತ್ರಜ್ಞಾನಗಳ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದು ಅದನ್ನು ಸದುಪಯೋಗಪಡಿಸಿ ವಿದ್ಯಾರ್ಥಿಜೀವನವನ್ನು ಸಾರ್ಥಕಗೊಳಿಸಿರೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸುರೇಶ ವಿ. ಯವರು ವಹಿಸಿದ್ದು ಕಾರ್ಯಕ್ರಮಕ್ಕೆ ಯಶಸ್ಸನ್ನು ಹಾರೈಸಿದರು. ಮುಖ್ಯ ಅತಿಥಿಗಳಾದ ಶ್ರೀ ಅಶ್ವಿನ್ ಎಲ್. ಶೆಟ್ಟಿ ಹಾಗೂ ವಿ.ಟಿ.ಯು. ವಿನ ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ.ಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸೂರ್ಯಶೇಖರ್ ಸ್ವಾಗತಿಸಿ, ಜತೆಕಾರ್ಯದರ್ಶಿ ಕಾರ್ತಿಕ್ ವಾರ್ಷಿಕ ವರದಿಯನ್ನು ಓದಿದರು. ತಾಂತ್ರಿಕ ಜತೆಕಾರ್ಯದರ್ಶಿ ಚಿಂತನ್ ಶಗ್ರಿತ್ ವಂದಿಸಿದರು. ಸಂಯೋಜಕರಾದ ಪ್ರೊ. ಕಿಶೋರ್ ಕುಮಾರ್ ಕೆ., ಪ್ರೊ. ವೆಂಕಟೇಶ್ ಯು.ಸಿ. ಹಾಗೂ ಕೋಶಾಧಿಕಾರಿ ಡಾ. ಸವಿತಾ ಸಿ.ಕೆ., ವಿಭಾಗದ ಎಲ್ಲಾ ಉಪನ್ಯಾಸಕರು ಹಾಗು ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅನುಷ ಎಸ್.ಎನ್. ಮತ್ತು ಲಖನ್ ಆರ್. ಅಯೋಧ್ಯಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮುಖ್ಯ ಅತಿಥಿಯವರಿಂದ “Technology Trends and Right Thinking”ವಿಷಯದ ಕುರಿತು ತಾಂತ್ರಿಕ ಉಪನ್ಯಾಸ ನಡೆಯಿತು.