ಉಬರಡ್ಕ : ಹಲಸಿನ ಹಣ್ಣು ಕೊಯ್ಯಲೆಂದು ಹೋದ ದಂಪತಿಗೆ ವಿದ್ಯುತ್ ಶಾಕ್- ಆಸ್ಪತ್ರೆಗೆ ದಾಖಲು

0

ಹಲಸಿನ ಹಣ್ಣು ಕೊಯ್ಯಲೆಂದು ಹೋದ ದಂಪತಿಗಳಿಬ್ಬರಿಗೆ ವಿದ್ಯುತ್ ಶಾಕ್ ಹೊಡೆದು ಆಸ್ಪತ್ರೆ ಸೇರಿರುವ ಘಟನೆ ಇಂದು ಬೆಳಿಗ್ಗೆ ಉಬರಡ್ಕದಿಂದ ವರದಿಯಾಗಿದೆ.


ಉಬರಡ್ಕದ ಸೊಸೈಟಿ ಸಮೀಪವಿರುವ ಕೃಷಿಕರಾದ ಸದಾಶಿವ ಭಟ್ ಎಂಬವರ ತೋಟದಲ್ಲಿ ಕೆಲಸ ನಿರ್ವಹಿಸುವ ಜಾರ್ಖಾಂಡ್ ಮೂಲದ ಈ ದಂಪತಿ ಇಂದು ಬೆಳಿಗ್ಗೆ ಕಬ್ಬಿಣದ ಗಳೆಯಲ್ಲಿ ಹಲಸಿನ ಹಣ್ಣು ಕೊಯ್ಯುತ್ತಿದ್ದಾಗ ವಿದ್ಯುತ್ ತಂತಿಗೆ ಗಳೆ ತಾಗಿ ವಿದ್ಯುತ್ ಪ್ರವಹಿಸಿ ಶಾಕ್‌ಗೆ ಒಳಗಾದರು.

ಕೂಡಲೇ ಅವರನ್ನು ಗ್ರಾ.ಪಂ. ಸದಸ್ಯ ಹರೀಶ್ ಉಬರಡ್ಕ ಮತ್ತು ಪ್ರಣವ್ ಎಂಬವರ ಕಾರಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತಂದಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ದಂಪತಿಯ ಹೆಸರು ರಾಜು ಮತ್ತು ಸುನೀತಾ ಎಂದು ತಿಳಿದು ಬಂದಿದೆ.