ಕಳೆದು ಹೋದ ಮೊಬೈಲ್ ಪೋಲೀಸರ ಸಹಾಯದಿಂದ ವಾರಸುದಾರರಿಗೆ

0

ಕಳೆದು ಹೋಗಿದ್ದ ಶಿಕ್ಷಕಿಯೊಬ್ಬರ ಮೊಬೈಲ್ ಫೋನ್ ಹಾಗೂ ದಾಖಲೆಗಳು ಪೋಲೀಸರ ಸಹಾಯದಿಂದ ವಾರಸುದಾರರ ಕೈ ಸೇರಿದ ಘಟನೆ ವರದಿಯಾಗಿದೆ.

ಡಿ.12 ರಂದು ಪಂಜ ಮೊರಾರ್ಜಿ ವಸತಿ ಶಾಲೆ ಶಿಕ್ಷಕಿ ಕುಸುಮ ಮುತ್ಲಾಜೆ ಇವರು ಸಂಜೆ ಜೀಪಿನಲ್ಲಿ ಬರುವಾಗ ದಾರಿಮಧ್ಯೆ ಅವರ ಫೋನ್ ಹಾಗು ಅದರೊಳಗೆ ಇಟ್ಟಿದ್ದ ಎಟಿಎಂ ಕಾರ್ಡ್ ಸಮೇತ ಕಳೆದು ಹೋಗಿತ್ತು.
ಬಳಿಕ ಕಳೆದು ಹೋಗಿದ್ದ ಫೋನ್ ಗೆ ಕಾಲ್ ಮಾಡಿದರೆ ರಿಸೀವ್ ಆಗುತ್ತಿರಲಿಲ್ಲ. ಕುಸುಮಾರವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೋಗಿ ಮೊಬೈಲ್ ಕಳೆದು ಹೋಗಿರುವ ಕುರಿತು ದೂರು ನೀಡಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಎಸ್ ಐ. ಮಂಜುನಾಥರು ಮೊಬೈಲ್ ಗುತ್ತಿಗಾರು ನಲ್ಲಿರುವುದು ಗೊತ್ತಾಗಿ ತಮ್ಮ ಸಿಬ್ಬಂದಿ ನಿತೀಶ್ ರನ್ನು ಕಳುಹಿಸಿಕೊಟ್ಟರು. ಪಿಗ್ಮಿ ಸಂಗ್ರಾಹಕ ಜಯರಾಮ ಭಟ್ ಗುತ್ತಿಗಾರು ಇವರಿಗೆ ಮೊಬೈಲ್ ಸಿಕ್ಕಿದ್ದು ಅವರು ಇದು ಯಾರದಿರಬಹುದೆಂದು ವಿಚಾರಿಸುತ್ತಿದ್ದುದರಿಂದ ಅವರಲ್ಲಿರುವುದು ತಿಳಿದುಬಂತೆನ್ನಲಾಗಿದೆ. ಬಳಿಕ ಪೋಲೀಸರ ಉಪಸ್ಥಿತಿ ಯಲ್ಲಿ ಕುಸುಮಾರಿಗೆ ಅದನ್ನು ಜಯರಾಮ ಭಟ್ ರು ಹಸ್ತಾಂತರ ಮಾಡಿದರು.