ಎನ್.ಎಂ.ಸಿ: ನನ್ನ ಭಾಷೆ; ನನ್ನ ಹಸ್ತಾಕ್ಷರ ಅಭಿಯಾನ

0

ನೆಹರು ಮೆಮೋರಿಯಲ್ ಕಾಲೇಜು ಆವರಣದಲ್ಲಿ ನನ್ನ ಭಾಷೆ, ನನ್ನ ಹಸ್ತಾಕ್ಷರ ಅಭಿಯಾನ ಕಾಲೇಜಿನ ಯು.ಜಿ.ಸಿ ಕೋಶದ (Uಉಅ ಅeಟಟ) ಸಂಯೋಜಕರಾದ ಡಾ. ವಿಜಯಲಕ್ಷ್ಮಿ ಎನ್.ಎಸ್ ಅವರ ನೇತೃತ್ವದಲ್ಲಿ .13 ರಂದು ನೆರವೇರಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಇದರ ಕಾರ್ಯದರ್ಶಿ ಕೆ.ವಿ ಹೇಮನಾಥ ಅವರು ಮಾತೃಭಾಷೆಯಲ್ಲಿ ಹಸ್ತಾಕ್ಷರ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದರು.


ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು ಹಾಗೂ ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಆದ ಕೆ.ಆರ್ ಗಂಗಾಧರ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಕಣಿಪಿಲ, ಎನ್.ಎಂ.ಸಿ ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್ ಎಂ.ಎಂ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕಿ ಶ್ರೀಮತಿ ಮಮತಾ ಕೆ. ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ. ಮಾತೃಭಾಷೆಯ ಪ್ರೇಮ ಮೆರೆದು, ತಮ್ಮ ಮಾತೃಭಾಷೆಗಳಲ್ಲಿಯೇ ಹಸ್ತಾಕ್ಷರ ಮಾಡಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೂ ಸಹ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಚೈತನ್ಯ ಕೆ. ಇವರು ತುಳು ಲಿಪಿಯಲ್ಲಿ ಹಸ್ತಾಕ್ಷರ ಮಾಡಿದ್ದು ಎಲ್ಲರ ಗಮನ ಸೆಳೆಯಿತು