ಕೃಷಿ‌ ಮೇಳಕ್ಕೆ ಸಿದ್ಧಗೊಳ್ಳುತ್ತಿದೆ ಸುಳ್ಯ : 120 ಕ್ಕೂ ಅಧಿಕ ಸ್ಟಾಲ್, ಪಾರಂಪರಿಕ ಗ್ರಾಮ, ಪ್ರಾಚ್ಯ ವಸ್ತು, ತಾರಾಲಯ, ಅಮ್ಯೂಸ್ ಮೆಂಟ್ ಪಾರ್ಕ್ ಕೃಷಿ ಮೇಳದ ಆಕರ್ಷಣೆ

0

ಸುಳ್ಯದ‌ ಚೆನ್ನಕೇಶವ ದೇವಸ್ಥಾನದ ‌ಮುಂಭಾಗ, ಪ್ರಭು ಗ್ರೌಂಡ್ ಸುತ್ತಮುತ್ತಲ ವಿಸ್ತಾರವಾದ ಸ್ಥಳದಲ್ಲಿ ಡಿ.16, 17 ಮತ್ತು 18 ರಂದು ಸುಳ್ಯದಲ್ಲಿ ಕೃಷಿ‌ ಮೇಳ ನಡೆಯಲಿದ್ದು ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ.

ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ವೇದಿಕೆ ಹಾಕಲಾಗಿದ್ದು ಅಲ್ಲಿ ಸಭೆ, ವಿಚಾರ ಸಂಕಿರಣ ನಡೆಯಲಿದೆ.

ಪಕ್ಕದ ಮೈದಾನದಲ್ಲಿ ವಿವಿಧ ಕೃಷಿ ಸಂಬಂಧಿ ಮಳಿಗೆ ಇರಲಿದ್ದು 120 ಕ್ಕೂ ಅಧಿಕ ಸ್ಟಾಲ್ ಹಾಕಲಾಗಿದೆ.

ಚೆನ್ನಕೇಶವ ದೇವಸ್ಥಾನದ ಪಕ್ಕದ ಪ್ರಭು ಗ್ರೌಂಡ್ ಹಾಗೂ ಪಕ್ಕದ ವಿಸ್ತಾರ ಜಾಗದಲ್ಲಿ ಪಾರಂಪರಿಕ ಗ್ರಾಮ ಹಾಗೂ ಪ್ರಾಚ್ಯ ವಸ್ತು ಸಂಗ್ರಹಾಲಯ, ಜತೆಗೆ ತಾರಾಲಯಕ್ಕೆ ವ್ಯವಸ್ಥೆ ಮಾಡಲಾಗಿದ್ದು‌ ಭರ್ಜರಿ ಕೆಲಸಗಳು ನಡೆಯುತ್ತಿವೆ.

ಸುಳ್ಯದ‌ ಧರ್ಮಸ್ಥಳ ಯೋಜನೆಯ ಎದುರಿನ‌ ಮೈದಾನದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ಬರಲಿದೆ. ಹೀಗೆ ಮೂರು ದಿನಗಳ ಕಾಲ ಸುಳ್ಯದಲ್ಲಿ ಕೃಷಿ‌ ಮೇಳದಲ್ಲಿ ಹಲವು ವೈಶಿಷ್ಟ್ಯ ನಡೆಯುವುದು.