ಪಯಸ್ವಿನಿ ಕೃಷಿ ಮೇಳದಲ್ಲಿ ಹಲವು ಕೃಷಿ ಸಾಧಕರಿಗೆ ಪಯಸ್ವಿನಿ ಕೃಷಿ ಸನ್ಮಾನ

0

ನಾಳೆಯಿಂದ ಸುಳ್ಯ ದ ಚೆನ್ನಕೇಶವ ದೇವಸ್ಥಾನದ ಮುಂಭಾಗ ನಡೆಯಲಿರುವ ಪಯಸ್ವಿನಿ ಬೃಹತ್ ಕೃಷಿ ಮೇಳದಲ್ಲಿ ಹಲವು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಡಿ.೧೬ ರಂದು ನಡೆಯುವ ಸಬಾ ಕಾರ್ಯಕ್ರಮದಲ್ಲಿ ಕೃಷಿ ಯಂತ್ರೋಪಕರಣಗಳ ತಯಾರಿಕಾ ಹರಿಯಪ್ಪ ಗೌಡ ಚೀಮುಳ್ಳು, ಸಮಗ್ರ ಕೃಷಿ, ಗಾರ್ಡನಿಂಗ್ ಸಾಧನೆಗಾಗಿ ತಿರುಮಲೇಶ್ವರ ಭಟ್ ಕುರಿಯಾಜೆ, ಸಮಗ್ರ ಕೃಷಿ ಸಾಧಕಿ ಶ್ರೀಮತಿ ವಸಂತಿ ಜನಾರ್ಧನ ನಡುಮುಟ್ಲುರವರಿಗೆ ಸನ್ಮಾನ ನಡೆಯಲಿದೆ.
ಡಿ.೧೭ ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜೇನು ಕೃಷಿಕ ತಿಮ್ಮಪ್ಪ ನಾಯ್ಕ ಬೇರ್‍ಯ, ಸಮಗ್ರ ಕೃಷಿಯ ಹರಿಕಾರ ಸುಂದರ ಮುದರ, ಪ್ರಗತಿಪರ ಕೃಷಿಕ ಪಿ.ಬಿ.ಪ್ರಭಾಕರ್ ರೈ, ಯುವ ಜೇನು ಕೃಷಿಕ ವಿವೇಕ್ ಪಡ್ಪು, ಸನ್ಮಾನ ಪಡೆಯಲಿದ್ದಾರೆ.
ಡಿ.೧೮ ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಉದಯ್‌ಕುಮಾರ್ ಕೆ.ಸಿ., ಬೆಳ್ತಂಗಡಿಯ ಸಮಗ್ರ ಕೃಷಿಕ ರಾಮಣ್ಣ, ಹೈನುಗಾರಿಕಾ ಕ್ಷೇತ್ರದಲ್ಲಿ ಶ್ರೀಮತಿ ಹೇಮಾವತಿ ಪುರುಷೋತ್ತಮ ಕೊಕುಳಿಯವರನ್ನು ಸನ್ಮಾನಿಸಲಾಗುವುದು.
ಶಾಲಾ ಕೈತೋಟ ಸಾಧನೆಗಾಗಿ ಸ.ಕಿ.ಪ್ರಾ.ಶಾಲೆ ಹಾಡಿಕಲ್ಲು, ಸ.ಕಿ.ಪ್ರಾ.ಅಚ್ರಪ್ಪಾಡಿ, ಸುಳ್ಯದ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿ. ಪ್ರಾ. ಶಾಲೆಯವರನ್ನು ಗುರುತಿಸುವ ಕಾರ್ಯವೂ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.