ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವ

0

ಭಕ್ತಿ , ಸಂಭ್ರಮದಿಂದ ನಡೆದ ಮಿತ್ತೂರು ನಾಯರ್ ದೈವದ ನೇಮೋತ್ಸವ

ಸುಳ್ಯ ಸೀಮೆಯ ಉಬರಡ್ಕ ಮಿತ್ತೂರು ಗ್ರಾಮದ ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವವು ಎ.25 ರಿಂದ ಪ್ರಾರಂಭಗೊಂಡಿದ್ದು ಮೇ 07 ರವರೆಗೆ ಭಕ್ತಿ ಸಂಭ್ರಮದಿಂದ ನಡೆಯಲಿರುವುದು.

ಎ.25 ರಂದು ಬೆಳಿಗ್ಗೆ ಮುಹೂರ್ತದ ಗೊನೆ ಕಡಿಯಲಾಯಿತು.
ಮೇ.01 ರಂದು ಮಿತ್ತೂರು ಮೂಲ ಸನ್ನಿಧಿಯಿಂದ ಉಳ್ಳಾಗಳ ಭಂಡಾರ ಬಂದು ವಾಲಸಿರಿಯಲ್ಲಿ ದೇವರಿಗೆ ಸ್ವಸ್ತಿಕೆ,ಬಲ್ಲಾಳರ ಕಾಣಿಕೆ,ಅಡ್ತಲೆ ಕಿರುಚಾವಡಿಗೆ ಭಂಡಾರ ಬಂದು ಉಳ್ಳಾಗಳ ದರ್ಶನ,ಪ್ರಸಾದ ವಿತರಣೆ,ಸಂಕ್ರಾಂತಿ ಪೂಜೆ ನಡೆಯಿತು.
ಮೇ.02 ರಂದು ಸಂಜೆ ಮಿತ್ತೂರು ನಾಯರ್ ಭಂಡಾರ ಬಂದು ಬಂದ್ಯತ್ತ ವಾಲಸಿರಿ,ಮಿತ್ತೂರು ನಾಯರಿಗೆ ಕಿರೀಟವಾಗಿ ಅಡ್ತಲೆ ಕಿರುಚಾವಡಿಗೆ ಬರುವುದು,ಪ್ರಸಾದ ವಿತರಣೆ,ಸಂಕ್ರಾಂತಿ ಪೂಜೆ ನಡೆಯಿತು.

ಮೇ.06 ರಂದು ರಾತ್ರಿ ವಾಲಸಿರಿ,ಉಳ್ಳಾಗಳಿಗೆ ಸಿರಿಮುಡಿ ನಾಯರಿಗೆ ಕಿರೀಟವಾಗಿ ಪಡಂಪಾಳಿ ಮಾಳಿಗೆಗೆ ಭಂಡಾರ ಬರುವುದು,ಉಳ್ಳಾಗಳ ದರ್ಶನ,ಪ್ರಸಾದ ವಿತರಣೆ ನಡೆಯಿತು.
ಮೇ.07 ರಂದು ಬೆಳಿಗ್ಗೆ ನಾಯರ್ ನೇಮ ನಡೆಯಿತು. ಮೇಲ್ಮಂಚಕ್ಕೆ ಕಾಯಿ ಒಡೆಯುವುದು,ದೂಳುಕಾಯಿ, ಅಂಬುಕಾಯಿ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಕೆದಂಬಾಡಿ ವೆಂಕಟ್ರಮಣ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಣಿಬೆಟ್ಟು ಪುರುಷೋತ್ತಮ ಗೌಡ,ಕಾರ್ಯದರ್ಶಿ ಪಿ.ಎಸ್.ಗಂಗಾಧರ್,ಮತ್ತು ಜೀರ್ಣೋದ್ಧಾರ ಸಮಿತಿ ಸದಸ್ಯರು,ಮೂವತ್ತೊಕ್ಕಲು,ಊರ ಸರ್ವ ಸಮಸ್ತರು ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.


ಅಪರಾಹ್ನ 1.00 ಗಂಟೆಗೆ ಚಾಕಟೆ ಅಡಿಯಲ್ಲಿ ಬಟ್ಟಲು ಕಾಣಿಕೆ,ಪ್ರಸಾದ ವಿತರಣೆ ,ಹರಕೆ,ಪೀಡೆ ಬಿಡಿಸಿವುದು,ತೊಡಕ – ಮಡಕ ನಡೆಯಲಿದೆ.
ಮೇ.11 ರಂದು ರಾತ್ರಿ ಗಂಟೆ 9.00 ಕ್ಕೆ ನಡಕಾನಕೊಚ್ಚಿ ಮಾಳಿಗೆಯಲ್ಲಿ ರಾಜಂದೈವಕ್ಕೆ ಕೂಡುವುದು.ಉಪದೈವಗಳ ಕೋಲ ನಡೆಯಲಿದೆ.
ಮೇ .12 ರಂದು ಹಗಲು ಗಂಟೆ 11.00 ಕ್ಕೆ ಮಾರಿಕಳಕ್ಕೆ,ಆಮೇಲೆ ಮುಳಿ ನಡೆಯಲಿದೆ.