ಪಯಸ್ವಿನಿ ಕೃಷಿ ಮೇಳ ಹಿನ್ನಲೆ : ಡಿ.16 ರಿಂದ 18 ರವರೆಗೆ ಸಂಜೆ 5 ಗಂಟೆಯಿಂದ ರೋಟರಿ ಶಾಲಾ ಬಳಿಯಿಂದ ಎಪಿಎಂಸಿವರೆಗೆ ವಾಹನ ಸಂಚಾರ ನಿಷೇಧ

0

ನಾಳೆಯಿಂದ ಚೆನ್ನಕೇಶವ ದೇವಸ್ಥಾನದ ಮುಂಭಾಗ ಹಾಗೂ ಅಕ್ಕಪಕ್ಕದ ಮೈದಾನಗಳಲ್ಲಿ ನಡೆಯಲಿರುವ ಕೃಷಿ ಮೇಳದ ಹಿನ್ನಲೆಯಲ್ಲಿ ವಾಹನ ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಡಿ. 16 ರಿಂದ 18ರವೆರೆಗೆ 3 ದಿನವೂ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸುಳ್ಯ ರೋಟರಿ ಶಾಲಾ ಬಳಿಯಿಂದ ಎಪಿಎಂಸಿವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬ್ಲಾಕ್ ಮಾಡಲಾಗುವುದೆಂದು ಸುಳ್ಯ ಆರಕ್ಷಕ ಅಧಿಕಾರಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.