ದುಗ್ಗಲಡ್ಕದಲ್ಲಿ ಶಿವಾಜಿ ಯುವ ವೃಂದದ ವತಿಯಿಂದ ನಿರ್ಮಾಣವಾದ ಭಗವಾಧ್ವಜ ಕಟ್ಟೆ ಉದ್ಘಾಟನೆ

0


ದುಗ್ಗಲಡ್ಕದಲ್ಲಿ ಶಿವಾಜಿ ಯುವ ವೃಂದದ ವತಿಯಿಂದ ನಿರ್ಮಾಣಗೊಂದ ಭಗವಾಧ್ವಜ ನೂತನ ಕಟ್ಟೆಯನ್ನು ಡಿ.17ರಂದು ಉದ್ಘಾಟನೆ ಮಾಡಲಾಯಿತು.


ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ರೈ ಉಬರಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘಟನೆಯ ಪ್ರಮುಖರಾದ ಪ್ರದ್ಯುಮ್ನ ಉಬರಡ್ಕ ಅತಿಥಿಯಾಗಿ ಭಾಗವಹಿಸಿದ್ದರು. ನ.ಪಂ.ಸದಸ್ಯರುಗಳಾದ ಬಾಲಕೃಷ್ಣ ರೈ ದುಗ್ಗಲಡ್ಕ, ಶ್ರೀಮತಿ ಶಶಿಕಲಾ ನೀರಬಿದಿರೆ, ಮಾಜಿ ಅಧ್ಯಕ್ಷರಾದ ಶ್ರೀಮತಿ ಶೀಲಾವತಿ ಮಾಧವ, ಪ್ರಮುಖರಾದ ದಿನೇಶ್ ಡಿ.ಕೆ., ಹೇಮಂತ್ ಕುಮಾರ್ ಕಂದಡ್ಕ, ಚಂದ್ರಶೇಖರ ಮೋಂಟಡ್ಕ, ಧನಂಜಯ(ಮನು )ದುಗ್ಗಲಡ್ಕ,ಮಹೇಶ್ ಮೇರ್ಕಜೆ, ಮೊದಲಾದವರು, ಶಿವಾಜಿ ಯುವ ವೃಂದದ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿವಪ್ರಸಾದ್ ಕೊಯಿಕುಳಿ ಮತ್ತು ಶಿವಪ್ರಸಾದ್ ಕುದ್ಪಾಜೆ ಕೊಡಮಾಡಿದ ಟೀ ಶರ್ಟ್ ಬಿಡುಗಡೆ ಮಾಡಲಾಯಿತು.
ಬಳಿಕ ಬಿ.ಜೆ.ಪಿ.ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಆಗಮಿಸಿ ಶುಭಹಾರೈಸಿದರು.