ಪಿಗ್ಮಿ ಸಂಗ್ರಾಹಕರ ಸಂಘದಿಂದ ಧನ ಸಹಾಯ ಹಸ್ತಾಂತರ

0

ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದಿಂದ ಇತ್ತೀಚೆಗೆ ಬೈಕ್ ಅಪಘಾತವಾಗಿ ಗಾಯಗೊಂಡಿರುವ ಪಿಗ್ಮಿ ಸಂಗ್ರಾಹಕ ,ಸಂಘದ ಸದಸ್ಯ ಸದಾಶಿವ ರಾವ್ ಇವರಿಗೆ ಮನೆಗೆ ಹೋಗಿ ಧನ ಸಹಾಯ ಹಸ್ತಾಂತರಿಸಲಾಯಿತು.
ಹಾಗೂ ಇತ್ತೀಚೆಗೆ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಘದ ಸದಸ್ಯ ಲಕ್ಷ್ಮೀಶ್ ಶೆಟ್ಟಿಯವರಿಗೂ ಧನ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಪಿಗ್ಮಿ ಸಂಗ್ರಾಹಕರ ಸಂಘದ ಅಧ್ಯಕ್ಷ ಎಂ.ಹರಿಶ್ಚಂದ್ರ,ಉಪಾಧ್ಯಕ್ಷ ವಸಂತ ಬೋರ್ಕರ್,ಕಾರ್ಯದರ್ಶಿ ರಾಮಚಂದ್ರ ಯದುಗಿರಿ, ಜತೆಕಾರ್ಯದರ್ಶಿ ಮಹಾಬಲ ರೈ, ಸದಸ್ಯರಾದ ಬಿ.ವಿ.ರಾಧಾಕೃಷ್ಣ , ಕು.ಲತಾಶ್ರೀ,ಸುನಿಲ್ ಕುಮಾರ್,ಪುಷ್ಪಾಕರ, ಶ್ರೀಮತಿ ಆರತಿ,ಪದ್ಮನಾಭ ನೆಕ್ರಾಜೆ ಉಪಸ್ಥಿತರಿದ್ದರು.