ಸುಳ್ಯದಲ್ಲಿ ಕಂದಾಯ ಅಧಿಕಾರಿಗಳ ದಾಳಿ, ಮೂರು ಲಾರಿಗಳ ವಶ

0

ಸುಳ್ಯ ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಮತ್ತು ಮರಳು ಸಾಗಾಟದ ಮೇಲೆ ನಡೆಯುತ್ತಿರುವ ಅಧಿಕಾರಿಗಳ ದಾಳಿಗಳು ಇಂದು ಕೂಡ ನಡೆದಿದೆ.
ಇಂದು ಬೆಳಿಗ್ಗೆ ಕಂದಾಯ ನಿರೀಕ್ಷಕರ ನೇತೃತ್ವದಲ್ಲಿ ಮರಳು ಸಾಗಾಟ ಮತ್ತು ಕೆಂಪು ಕಲ್ಲಿನ ಸಾಗಾಟದ ಲಾರಿಗಳ ಮೇಲೆ ದಿಢೀರ್ ದಾಳಿ ನಡೆದು ಎರಡು ಮರಳು ಲಾರಿ ಮತ್ತು ಒಂದು ಕೆಂಪು ಕಲ್ಲಿನ ಸಾಗಾಟದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.


ಅಜ್ಜಾವರ ಗ್ರಾಮದ ವಿ ಎ ಶರತ್ ನೇತೃತ್ವದಲ್ಲಿ ಆಲೆಟ್ಟಿಯ ಮಿತ್ತಡ್ಕ ಬಳಿ ಮತ್ತು ಅಜ್ಜಾವರದ ಕಾಂತಮಂಗಲ ಬಳಿ ಮರಳ ಲಾರಿಯನ್ನು ವಶಪಡಿಸಿಕೊಂಡರೆ, ಕೇರಳ ಭಾಗದಿಂದ ಬರುತ್ತಿದ್ದ ಕೆಂಪು ಕಲ್ಲಿನ ಲಾರಿಯನ್ನು ಸುಳ್ಯ ವಿವೇಕಾನಂದ ಸರ್ಕಲ್ ಬಳಿ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗಡೆಯವರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.


ಇದೀಗ ಮೂರು ವಾಹನವನ್ನು ಕಂದಾಯ ನಿರೀಕ್ಷಕರ ಕಚೇರಿ ಬಳಿ ಇರಿಸಲಾಗಿದ್ದು ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.