ಬೆಳಗಾವಿಯಲ್ಲಿ ನಡೆಯುವ “ಅಸ್ಮಿತೆ” ಸರಸ್ ಮೇಳಕ್ಕೆ ತೆರಳುವ ಗುತ್ತಿಗಾರಿನ ತಂಡಕ್ಕೆ ಬೀಳ್ಕೊಡುಗೆ

0

ಬೆಳಗಾವಿಯಲ್ಲಿ ಡಿ.22 ರಿಂದ ಡಿ.30 ರ ವರಗೆ ನಡೆಯುತ್ತಿರುವ “ಅಸ್ಮಿತೆ” ಸರಸ್ ಮೇಳದ ಲೈವ್ ಫುಡ್ ಪೆಸ್ಟ್ ನಲ್ಲಿ
ಗುತ್ತಿಗಾರಿನ “ದೀಪ ಸಂಜೀವಿನಿ” ಭಾಗವಹಿಸುತಿದ್ದು ತಂಡದ ಸದಸ್ಯೆಯರಾದ ಶಾರದ ನಡುಗಲ್ಲು, ಇಂದಿರಾ ಬಾಳುಗೋಡು,ಸೆಲಿನ ಸೆಬಾಸ್ಟಿನ್,ರಮ್ಯ ಉಜಿರಡ್ಕ,ಚೈತನ್ಯ ಇವರುಗಳನ್ನು ಡಿ.20 ರಂದು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ವತಿಯಿಂದ ಬೀಳ್ಕೊಡಲಾಯಿತು.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಿಂದ ಪ್ರತಿನಿಧಿಸುತ್ತಿರುವ ಏಕೈಕ ತಂಡ ಇದಾಗಿದ್ದು, ಕಳೆದ ಬಾರಿ ರಾಷ್ಟ್ರೀಯ ಮಟ್ಟದ ಫುಡ್ ಪೆಸ್ಟ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಗುತ್ತಿಗಾರಿನ ಅಮರ ಸಂಜೀವಿನಿ ಒಕ್ಕೂಟದ ಸಿದ್ದಿದಾತ್ರಿ ತಂಡದ್ದು. ಬೀಳ್ಕೊಡುಗೆ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ರೇವತಿ ಆಚಳ್ಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ತಾಲ್ಲೂಕು ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಶ್ವೇತ, ಒಕ್ಕೂಟದ ಅಧ್ಯಕ್ಷರಾದ ದಿವ್ಯ ಸುಜನ್ ಗುಡ್ಡೆಮನೆ, ಪಂಚಾಯತ್ ಸದಸ್ಯೆ ಲತಾ ಆಜಡ್ಕ, ಎಂ ಬಿ ಕೆ ಮಿತ್ರಕುಮಾರಿ ಚಿಕ್ಮುಳಿ, ಎಲ್ ಸಿ ಆರ್ ಪಿ ದಿವ್ಯ ಚತ್ರಪ್ಪಾಡಿ, ಸವಿತ ಕುಳ್ಳಂಪಾಡಿ,ಗೀತ ವಳಲಂಬೆ, ಗ್ರಂಥಪಾಲಕಿ ಅಭಿಲಾಷ ಉಪಸ್ಥಿತರಿದ್ದರು.