ಸುಳ್ಯ ತಾಲೂಕು ಸ್ತ್ತೀ ಶಕ್ತಿ ಬ್ಲಾಕ್ ಸೊಸೈಟಿ ವಾರ್ಷಿಕ ಮಹಾಸಭೆ, ರೆಂಜಾಳ ಸ್ತ್ರೀ ಶಕ್ತಿ ಗುಂಪಿಗೆ ಉತ್ತಮ ಸ್ತ್ರೀ ಶಕ್ತಿ ಗುಂಪು ಪ್ರಶಸ್ತಿ

0

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ವಾರ್ಷಿಕ ಮಹಾಸಭೆ ಡಿ.21 ರಂದು ಸುಳ್ಯ ಕೆವಿಜಿ ಪುರಭವನ ದಲ್ಲಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಶ್ರೀಮತಿ ರಾಜೀವಿ ಯವರ ಅಧ್ಯಕ್ಷತೆ ವಹಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಶ್ಮಿ ಶಿಶು ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಶ್ರೀಮತಿ ಶೈಲಜಾ, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಸ್ತುತ ವರ್ಷದ ವರದಿಯನ್ನು ಕಾರ್ಯದರ್ಶಿ ಎಂ ಜಿ ದಿವ್ಯವಿಶ್ವನಾಥ್ ದೇವರಗುಂಡ,ಲೆಕ್ಕಪತ್ರವನ್ನು ಕೋಶಾಧಿಕಾರಿ ಆಶಾ ರೈ ಜಾಲ್ಸೂರು ರವರು ವಾಚಿಸಿದರು.


ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿಯರಾದ ದೀಪಿಕಾ, ಉಷಾ,ರವೀಶ್ರೀ,ವಿಜಯ ಜೆ ಡಿ ಇದ್ದರು.
ಶ್ರೀಮತಿ ವೇದಾಶೆಟ್ಟಿ ಮತ್ತು ಶ್ರೀಮತಿ ಹರ್ಷೀನಿ ಬಾಳುಗೋಡು ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ರೆಂಜಾಳ ಅಂಗನವಾಡಿ ಕೇಂದ್ರದ ಸ್ತ್ರೀ ಶಕ್ತಿ ಸ್ವಸಹಾಯ ಗುಂಪಿಗೆ ಉತ್ತಮ ಸ್ತ್ರೀ ಶಕ್ತಿ ಗುಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಹಾಗೂ ದ್ವೀತಿಯ ಪಿ ಯು ಸಿ ಪ್ರೋತ್ಸಾಹ ಧನ ವಿತರಿಸಲಾಯಿತು.