ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ

0

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ 25ನೇ ವರ್ಷದ ವಾರ್ಷಿಕೋತ್ಸವ ಡಿ. 23ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಐಎಎಸ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗೌರವ ಅತಿಥಿಯಾಗಿ ಸಹ್ಯಾದ್ರಿ ಕಾಲೇಜಿನ ಕಂಪ್ಯೂಟರ್ ಇಂಜಿನಿಯರಿಂಗ್ ಸೈಬರ್ ಸೆಕ್ಯುರಿಟಿ ಮತ್ತು ಸೈಬರ್ ಲಾ ಟ್ರೈನರ್ ಪ್ರೊಫೆಸರ್ ಡಾ. ಅನಂತ ಪ್ರಭು ಜಿ ಭಾಗವಹಿಸಿದ್ದರು. ಶಿಕ್ಷಣಗಂಗಾ ಎಜ್ಯುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಪುಟ್ಟಣ್ಣ ಗೌಡ ಮೋಂಟಡ್ಕ, ಸಂಸ್ಥೆಯ ಸಂಚಾಲಕರಾದ ಎಂ.ಪಿ. ಉಮೇಶ್, ಟ್ರಸ್ಟಿಗಳಾದ ಶ್ರೀಮತಿ ರಜನಿ ಉಮೇಶ್, ಆಕಾಂಕ್ಷ ನಿಖಿಲ್, ಉಡುಪಿಯ ಬಾಳಿಗ ಫಿಶ್ ನೆಟ್ ಕಂಪನಿಯ ನಿರ್ದೇಶಕ ನಿಖಿಲ್ ಬಾಳಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ದೇಚಮ್ಮ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ವಾರಿಜಾಕ್ಷಿ ಮತ್ತು ರೇಷ್ಮಾ ಕ್ರೀಡಾ ಸ್ಪರ್ಧೆಗಳ ವಿಜೇತರ ವಾಚಿಸಿದರು. ಶಿಕ್ಷಕಿ ಸುಧಾ ವಿ.ಜೆ ಅಗಲಿದ ಟ್ರಸ್ಟಿ ಶ್ರೀಮತಿ ಗಂಗಮ್ಮ ಮತ್ತು ಸಿಬ್ಬಂದಿಗಳಿಗೆ ಹೆಸರು ಓದಿ ಹೇಳಿ ಬಳಿಕ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಉನ್ನತ ಹುದ್ದೆಯನ್ನು ಪಡೆದಿರುವ ಶ್ರೀಮತಿ ಸ್ವಾತಿ ಆಚಾರ್ ಮತ್ತು ಶ್ರೀಮತಿ ಎ. ವೀಣಾ ಶೇಡಿಕಜೆಯವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಸ್ಥೆಯ ಹಳೆವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಈ ಸಂದರ್ಭದಲ್ಲಿ ನಡೆಯಿತು. ಕು. ಲಿಖಾ ಸ್ವಾಗತಿಸಿ ಕು. ತನ್ವಿ ಎಂ.ಪಿ. ವಂದಿಸಿದರು. ವಿದ್ಯಾರ್ಥಿಗಳಾದ ಆದಿತ್ಯನಾರಾಯಣ ಅತಿಥಿ ಡಾ. ಕುಮಾರ್ ಐಎಎಸ್ ಮತ್ತು ಸಮೃದ್ಧಿ ಶೆಣೈ ಪ್ರೊ.ಅನಂತ ಪ್ರಭು ರವರನ್ನು ಪರಿಚಯಿಸಿದರು.

ಕು. ಸ್ತುತಿ ಮತ್ತು ಅಸರ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕೊನೆಯಲ್ಲಿ ಸಹಭೋಜನ ನಡೆಯಿತು.