ಕೊಡಿಯಾಲ : ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಪುನ: ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ

0

ಕೊಡಿಯಾಲ ಗ್ರಾಮದ ಕಲ್ಪಡ ಶ್ರೀ ಉಳ್ಳಾಕುಲು ಮೂಲಸ್ಥಾನದಲ್ಲಿ ಉಳ್ಳಾಕುಲು,ಚಾಮುಂಡಿ ಹಾಗೂ ಪರಿವಾರ ದೈವಗಳ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವವು ಜ.14 ರಿಂದ ಜ.16 ರವರೆಗೆ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯು ಡಿ.23 ರಂದು ನಡೆಯಿತು.
ಈ ಸಂದರ್ಭದಲ್ಲಿ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರರಾದ ಶಿವರಾಮ ಉಪಾಧ್ಯಾಯ ಮಾಲ್ಯತ್ತಾರು,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೇಶವ ಕೆ.ಪಿ ಕಲ್ಪಡ ತೋಟ,ಉಪಾಧ್ಯಕ್ಷರಾದ ಮನೋಹರ ಕೆ, ಕಾರ್ಯದರ್ಶಿ ಹರ್ಷನ್ ಕೆ.ಟಿ, ಜತೆಕಾರ್ಯದರ್ಶಿ ಗಣೇಶ್ ಪೆರ್ಲೋಡಿ.ಪ್ರಚಾರ ಸಮಿತಿಯ ಸಂಚಾಲಕ ರಾದ ಪ್ರಸಾದ್ ಕೆ.ಕೆ ಹಿರಿಯರಾದ ರಾಮಚಂದ್ರ ಉಪಾಧ್ಯಾಯ,ಚಿದಾನಂದ ಉಪಾಧ್ಯಾಯ, ಜಗನ್ನಾಥ ಕೆ,ಉಪಾಧ್ಯಾಯ,ಸಮಿತಿ ಸದಸ್ಯರಾದ ಲೋಕೇಶ್ ತಾಳಿತ್ತಡಿ,ಭಾಸ್ಕರ ಗೌಡ ಗುತ್ತು,ಭರತ್ ಕಲ್ಪಡ ತೋಟ,ದೀಕ್ಷಿತ್ ಕುಕ್ಕುತ್ತಡಿ,ಆನಂದ ಆಚಾರ್ಯ ಮಜ್ಜಾರು,ಯುವರಾಜ ಇಪ್ಪುಳ್ತಡಿ,ರಾಜೇಶ್ ಕಣಿಲೆಗುಂಡಿ,ಧರ್ಮಪಾಲ ಇಪ್ಪುಳ್ತಡಿ,ಚಂದ್ರಶೇಖರ ಕಲ್ಪಡ ಉಪಸ್ಥಿತರಿದ್ದರು.