ಸುಳ್ಯದ  ಫುಡ್ ಪಾಯಿಂಟ್  ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಕಾಣೆ, ಪತ್ನಿಯಿಂದ ಸುಳ್ಯ ಠಾಣೆಗೆ ದೂರು

0

ಕೆವಿಜಿ ಬಳಿ  ಫುಡ್ ಪಾಯಿಂಟ್ ನಲ್ಲಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದ ಬಂಟ್ವಾಳ ತಾಲೂಕಿನ  ವಾಮಪದವು ನಿವಾಸಿ ನಾಗೇಶ್ (33 ವರ್ಷ)  ಕ್ಯಾಂಟೀನ್ ನಲ್ಲಿ ಊಟ ಮುಗಿಸಿ  ರೂಮಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಮತ್ತೆ ಮರಳಿ ಬಾರದೆ ಇದ್ದು ನಾಪತ್ತೆಯಾಗಿರುವುದಾಗಿ ಸುಳ್ಯ ಠಾಣೆಯಲ್ಲಿ  ಆತನ ಪತ್ನಿ ಗೀತಾ ಎಂಬುವವರು  ದೂರು ನೀಡಿದ ಘಟನೆ ವರದಿಯಾಗಿದೆ.
ನಾಗೇಶ್ ರವರು ಕೂಲಿ ಕೆಲಸ ಮಾಡಿಕೊಂಡು ಸುಳ್ಯದಲ್ಲಿದ್ದು,  ಕೆಲಸ ಸರಿಯಾಗಿ ಇಲ್ಲದ ಕಾರಣ  ಕೆವಿಜಿ ಆಸ್ಪತ್ರೆ ಬಳಿ ಇರುವ ಪ್ರಕಾಶ್ ಚಂದ್ರ ಎಂಬುವವರ  ಕೆವಿಜಿ ಫುಡ್ ಪಾಯಿಂಟ್ ನಲ್ಲಿ ಕಳೆದ ಸೆಪ್ಟಂಬರ್ ತಿಂಗಳಿನಿಂದ  ಕೆಲಸಕ್ಕೆ ಸೇರಿಕೊಂಡಿದ್ದರು ಎನ್ನಲಾಗಿದೆ.
ಡಿಸೆಂಬರ್ 16ರಂದು ಗೀತಾ ರವರು ತನ್ನ ಪತಿ ನಾಗೇಶ್ ರವರ ಬಳಿ ದೂರವಾಣಿ ಮೂಲಕ  ಮಾತಾಡಿದಾಗ ಜನವರಿ ತಿಂಗಳಿನಲ್ಲಿ ಮನೆಗೆ ಬರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಡಿಸೆಂಬರ್ 18ರಂದು ಸಂಜೆ 5:30 ಗಂಟೆಗೆ ಅವರು ತಂಗಿರುವ ರೂಮಿನಲ್ಲಿ  ಇಲ್ಲದ ವಿಷಯ ತಿಳಿದು  ಸಂಬಂಧಪಟ್ಟವರಲ್ಲಿ ಮತ್ತು  ಕುಟುಂಬಸ್ಥರಿಗೆ  ವಿಚಾರಿಸಿದಾಗ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ.
ಇದರಿಂದ ನನ್ನ ಪತಿಯನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.
ನಾಗೇಶ್ ಅವರ ಮಾಹಿತಿ ಸಾರ್ವಜನಿಕರಲ್ಲಿ ಯಾರಿಗಾದರೂ ತಿಳಿದುಬಂದರೆ ಕೂಡಲೇ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಕಾಣೆಯಾದ ಸಂದರ್ಭ  ನೀಲಿ ಬಣ್ಣದ ಶರ್ಟ್ ಮತ್ತು ಕೇಸರಿ ಬಣ್ಣದ ಪಂಚೆಯನ್ನು ಧರಿಸಿದ್ದರು. ಕನ್ನಡ ತುಳು ಮಾತನಾಡುವ ಇವರು  ಸುಮಾರು 5.7   ಎತ್ತರವಿದ್ದಾರೆಂದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.