ರಾಷ್ಟ್ರೀಯ ಮಟ್ಟದ ಕಬಡ್ಡಿ ಆಡಿದ ಮಿಥುನ್ ಗೌಡ ಮಲ್ಲಾರ

0

ಏನೆಕಲ್ಲು ಗ್ರಾಮದ ಮಿಥುನ್ ಗೌಡ ಮಲ್ಲಾರ ಮಂಗಳೂರು ವಿಶ್ವವಿದ್ಯಾಲಯ ಪ್ರತಿನಿಧಿಸಿ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದಾರೆ.

ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಕಲಾ ಪದವಿ ಓದುತ್ತಿರುವ ಮಿಥುನ್ ಗೌಡ ಅವರು ಮಂಗಳೂರು ವಿಶ್ವವಿದ್ಯಾಲಯ ಪ್ರತಿನಿಧಿಸಿ ಸೌತ್ ಝೋನ್ ಪಂದ್ಯದಲ್ಲಿ ರನ್ನರ್ ಅಪ್ ಪಡೆದು ಹರಿಯಾಣದಲ್ಲಿ ಡಿ.17 ರಿಂದ ಡಿ.20 ರ ವರಗೆ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಬಡ್ಡಿ ಪಂದ್ಯ ಆಡಿರುತ್ತಾರೆ.


ಈ ರಾಷ್ಟ್ರೀಯ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪ್ರತಿನಿಧಿಸಿ ಪ್ರೋ ಕಬಡ್ಡಿ ಆಡಿರುವ ಸಚಿನ್ ಪ್ರತಾಪ್ ಐವರ್ನಾಡು ಕೂಡ ಆಡಿದ್ದರು.
ಮಿಥುನ್ ಅವರು ಏನೆಕಲ್ಲಿನ ಸುಂದರ ಮಲ್ಲಾರ ಮತ್ತು ಶ್ರೀಮತಿ ವಸಂತಿ ಮಲ್ಲಾರ ದಂಪತಿಗಳ ಪುತ್ರ.