ಗೋಪಾಲಕೃಷ್ಣ ಭಟ್ ರವರ ಸಾರ್ವಜನಿಕ ಅಭಿನಂದನಾ ಸಮಿತಿ ಸಭೆ- ಲೆಕ್ಕ ಪತ್ರ ಮಂಡನೆ ಹಾಗೂ ಅಭಿನಂದನೆ

0

ಅರಂಬೂರಿನ ಧರ್ಮಾರಣ್ಯದಲ್ಲಿ ಡಿ.11 ರಂದು ನಡೆದ ಗೋಪಾಲಕೃಷ್ಣ ಭಟ್ ರವರ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದ ಲೆಕ್ಕ ಪತ್ರ ಮಂಡನೆ ಹಾಗೂ ಸಹಕರಿಸಿ ಊರ ಸರ್ವರಿಗೂ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಅಶೋಕ ಪ್ರಭು ರವರ ಅಧ್ಯಕ್ಷತೆಯಲ್ಲಿ ಡಿ.29 ರಂದು ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು.
ಸಮಿತಿ ಕೋಶಾಧಿಕಾರಿ ಕೆ. ಆರ್.ಕೃಷ್ಣಮೂರ್ತಿ ಲೆಕ್ಕ ಪತ್ರ ಮಂಡಿಸಿದರು.
ಧರ್ಮಾರಣ್ಯದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವು ಸುಳ್ಯ ಜ್ಯೋತಿ ವೃತ್ತದಿಂದ ಅರಂಬೂರು ಧರ್ಮಾರಣ್ಯದ ವರೆಗೆ ಹೂವಿನಿಂದ ಅಲಂಕೃತ ವಾಹನದಲ್ಲಿ ಹಾಗೂ ನೂರಾರು ಅಟೋ ರಿಕ್ಷಾಗಳ ಮೆರವಣಿಗೆಯೊಂದಿಗೆ ನಡೆದಿತ್ತು. ಕಾರ್ಯಕ್ರಮ ದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸಮಿತಿಯ ಅಧ್ಯಕ್ಷರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.
ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಡಾ.ಗಿರೀಶ್ ಭಾರದ್ವಾಜ್, ಸಮಿತಿ ಪದಾಧಿಕಾರಿಗಳಾದ ಕುಮಾರಸ್ವಾಮಿ ತೆಕ್ಕುಂಜ, ಉಮೇಶ್ ಪಿ.ಕೆ, ರಾಧಾಕೃಷ್ಣ ಬೈತಡ್ಕ, ಕೆ.ಆರ್.ಕೃಷ್ಣಮೂರ್ತಿ, ಚಂದ್ರಶೇಖರ ಮರ್ಕಂಜ, ರವಿಕುಮಾರ್ ಸುಳ್ಯ, ಶ್ರೀದೇವಿನಾಗರಾಜ್ ಭಟ್, ಡಾ.ವಿದ್ಯಾ
ಶ್ರೀಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಅಶೋಕ ಪ್ರಭು ರವರು ಸ್ವಾಗತಿಸಿ, ವಂದಿಸಿದರು.