ಕುಮಾರಸ್ವಾಮಿ ತೆಕ್ಕುಂಜ ರವರ ವಡಾಪಾವ್ ಕಟಿಂಗ್ ಚಾಯ್ ಕಥಾ ಸಂಕಲನ ಬಿಡುಗಡೆ

0

ಆಲೆಟ್ಟಿ ಗ್ರಾಮದ ಅರಂಬೂರು ನಿವಾಸಿ ಸಾಹಿತಿ ಕುಮಾರಸ್ವಾಮಿ ತೆಕ್ಕುಂಜ ರವರು ಬರೆದ ಕಥಾ ಸಂಕಲನ ವಡಾಪಾವ್ ಕಟಿಂಗ್ ಚಾಯ್ ಇದರ ಬಿಡುಗಡೆಯು ಹಿರಿಯ ಸಾಹಿತಿ ಕವಿ ಸುಬ್ರಾಯ ಚೊಕ್ಕಾಡಿಯವರ ಮನೆಯಲ್ಲಿ ಡಿ‌.25 ರಂದು ನೆರವೇರಿತು.
ಈ ಕಥಾ ಸಂಕಲನದಲ್ಲಿ 12 ಕಥೆಗಳು ಒಳಗೊಂಡಿದ್ದು ಇವರ ಮೊದಲ ಕಥಾ ಸಂಕಲನ ಇದಾಗಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕುನಾರ್ಡ ಗ್ರಾಮದ ತೆಕ್ಕುಂಜ ಮನೆತನದ ಕುಮಾರಸ್ವಾಮಿ ಯವರು ಉದ್ಯೋಗಿಯಾಗಿ ಹಲವಾರು ವರುಷಗಳಿಂದ. ಮುಂಬಯಿಯಲ್ಲಿ ನೆಲೆಸಿದ್ದು 2019 ರಲ್ಲಿ ವೃತ್ತಿಯಿಂದ ನಿವೃತ್ತಿ ಯಾಗಿ ಪ್ರಸ್ತುತ ಅರಂಬೂರಿನಲ್ಲಿ ವಾಸವಾಗಿದ್ದಾರೆ.